Home » Chennai: ಸಿನಿಮಾಕ್ಕಾಗಿ ಮೊಮ್ಮಗನ ಸಾಲ; ನಟ ಶಿವಾಜಿ ಗಣೇಶನ್‌ ಮನೆ ಜಪ್ತಿ

Chennai: ಸಿನಿಮಾಕ್ಕಾಗಿ ಮೊಮ್ಮಗನ ಸಾಲ; ನಟ ಶಿವಾಜಿ ಗಣೇಶನ್‌ ಮನೆ ಜಪ್ತಿ

0 comments

Chennai: ಚೆನ್ನೈ ಹೈಕೋರ್ಟ್‌ ಸೋಮವಾರ (ಮಾ.3) ಇಂದು ʼಜಗ ಜಾಲ ಕಿಲಾಡಿʼ ತಮಿಳು ಸಿನಿಮಾ ನಿರ್ಮಾಣಕ್ಕೆಂದು ಪಡೆದುಕೊಂಡಿದ್ದ ಸಾಲದ ಮೊತ್ತವನ್ನು ಮರು ಪಾವತಿಸದ ಪ್ರಕರಣಕ್ಕೆ ಕುರಿತಂತೆ ದಿ.ಶಿವಾಜಿ ಗಣೇಶನ್‌ ಅವರ ನಿವಾಸವನ್ನು ಜಪ್ತಿ ಮಾಡುವಂತೆ ಆದೇಶ ನೀಡಿದೆ.

ಶಿವಾಜಿ ಗಣೇಶನ್‌ ಅವರ ಮೊಮ್ಮಗ ನಟ ದುಷ್ಯಂತ ಮತ್ತು ಪತ್ನಿ ಅಬಿರಾಬಿ ಒಡೆತನದ ಈಶನ್‌ ಪ್ರೊಡಕ್ಷನ್ಸ್‌ ಕಂಪನಿಯ ಪ್ರಕರಣ ಇದಾಗಿದೆ. ನಟ ದುಷ್ಯಂತ ಒಡೆತನದ ಸಂಸ್ಥೆ ಧನಭಾಗ್ಯಂ ಎಂಟರ್‌ಪ್ರೈಸಸ್‌ನಿಂದ ಸಿನಿಮಾ ನಿರ್ಮಾಣಕ್ಕೆಂದು 3.74 ಕೋಟಿ ರೂಪಾಯಿ ಸಾಲ ಪಡೆದಿದ್ದು, ಆದರೆ ಕರಾರಿನಂತೆ ಸಾಲ ಮರುಪಾವತಿ ಮಾಡಿರಲಿಲ್ಲವಾಗಿತ್ತು.

ನಂತರ ಕೋರ್ಟ್‌ ಮೆಟ್ಟಿಲೇರಿದ್ದ ಈ ಪ್ರಕರಣ, ಕಾಲಾವಕಾಶದ ಕೋರಿಕೆಯನ್ನು ನಿರಾಕರಿಸಿದ ಹೈಕೋರ್ಟ್‌ ಶಿವಾಜಿ ಗಣೇಶನ್‌ ಅವರ ಆಸ್ತಿಯನ್ನು ಜಪ್ತಿ ಮಾಡಿ ಹರಾಜು ಹಾಕಲು ಆದೇಶ ನೀಡಿದೆ.

You may also like