Home » Cheque: ಸರಕಾರ ಅರ್ಚಕನಿಗೆ ನೀಡಿದ್ದ ರೂ.35000 ಚೆಕ್‌ ಬೌನ್ಸ್‌

Cheque: ಸರಕಾರ ಅರ್ಚಕನಿಗೆ ನೀಡಿದ್ದ ರೂ.35000 ಚೆಕ್‌ ಬೌನ್ಸ್‌

0 comments
Money Rules Changing

Karnataka Government: ದೇವಸ್ಥಾನದ ಅರ್ಚಕರಿಗೆ ನೀಡಿದ್ದ ಸರಕಾರಿ ಚೆಕ್‌, ಅಮಾನ್ಯ ಆಗಿರುವ ಪ್ರಕರಣವೊಂದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪಟ್ಟಣ ಸಮೀಪದ ಶ್ರೀಕ್ಷೇತ್ರ ಕೂಡ್ಲಿ ಗ್ರಾಮದಲ್ಲಿ ನಡೆದಿದೆ.

ಜು.1 ರ ದಿನಾಂಕ ನಮೂದಿಸಿ, ಮುಜರಾಯಿ ಇಲಾಖೆಗೆ ಒಳಪಟ್ಟ ಪಾರ್ವತಿ ಬ್ರಹ್ಮೇಶ್ವರದ ದೇಗುಲದ ಅರ್ಚಕ ಕೆ.ಆರ್.ಆನಂದ್‌ ಅವರ ಮೂರು ತಿಂಗಳ ವೇತನ ಹಾಗೂ ಇತರೆ ನಿರ್ವಹಣೆ ವೆಚ್ಚ ಸೇರಿ ಒಟ್ಟು 35,600 ರೂ ಮೌಲ್ಯದ ಚೆಕನ್ನು ಶಿವಮೊಗ್ಗ ತಹಶೀಲ್ದಾರ್‌ ಅವರು ಸೀಲು ಸಹಿ ಮಾಡಿ ಕೊಟ್ಟಿದ್ದು, ಅದನ್ನು ನಗದೀಕರಣ ಮಾಡಲು ಕೂಡ್ಲಿ ಕರ್ನಾಟಕ ಬ್ಯಾಂಕಿಗೆ ನೀಡಲಾಗಿತ್ತು.

ಚೆಕ್‌ ನೀಡಲಾಗಿದ್ದ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಅಮಾನ್ಯಗೊಂಡಿದೆ ಎಂದು ಬ್ಯಾಂಕಿನಿಂದ ಹಿಂಬರಹ ನೀಡಿ ಚೆಕ್‌ ವಾಪಸ್ಸು ನೀಡಲಾಗಿದೆ.

You may also like