Home » Chicken: ತಮಿಳುನಾಡಿನಲ್ಲಿ ಮುಷ್ಕರ, ಕರ್ನಾಟಕದಲ್ಲಿ ಗಗನಕ್ಕೇರಿದ ಕೋಳಿ ಮಾಂಸದ ಬೆಲೆ!

Chicken: ತಮಿಳುನಾಡಿನಲ್ಲಿ ಮುಷ್ಕರ, ಕರ್ನಾಟಕದಲ್ಲಿ ಗಗನಕ್ಕೇರಿದ ಕೋಳಿ ಮಾಂಸದ ಬೆಲೆ!

0 comments
Chicken Price Hike

Chicken: ತಮಿಳುನಾಡಿನ ಕೋಳಿ ಸಾಕಾಣಿಕೆ ರೈತರು ಮತ್ತು ಬ್ರಾಯ್ಲರ್ ಕಂಪನಿಗಳ ನಡುವಿನ ವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ದಕ್ಷಿಣ ಭಾರತದಾದ್ಯಂತ ಚಿಕನ್ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಸಾಕಾಣಿಕೆ ದರ ಪರಿಷ್ಕರಣೆಗೆ ಒತ್ತಾಯಿಸಿ ತಮಿಳುನಾಡಿನ ಕೋಳಿ ಸಾಕಾಣಿಕೆದಾರರು ಜನವರಿ 1ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಕೋಳಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದಾರೆ.

ತಮಿಳುನಾಡಿನ ಪಲ್ಲಡಂ, ತಿರುಪ್ಪೂರ್, ಈರೋಡ್ ಮತ್ತು ಕೊಯಮತ್ತೂರು ಭಾಗದ ಸಾವಿರಾರು ರೈತರು ಖಾಸಗಿ ಬ್ರಾಯ್ಲರ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ರೈತರ ಪ್ರಕಾರ, ಕಳೆದ 5-6 ವರ್ಷಗಳಿಂದ ಕಂಪನಿಗಳು ರೈತರಿಗೆ ನೀಡುವ ಪ್ರತಿ ಕೆಜಿ ಕೋಳಿಯ ಸಾಕಾಣಿಕೆ ದರ ಕೇವಲ 6.5 ರೂ.ನಷ್ಟಿದೆ. ಆದರೆ, ಈ ಅವಧಿಯಲ್ಲಿ ವಿದ್ಯುತ್ ದರ, ಕಾರ್ಮಿಕರ ವೆಚ್ಚ ಮತ್ತು ನಿರ್ವಹಣಾ ವೆಚ್ಚಗಳು ದುಪ್ಪಟ್ಟಾಗಿವೆ.

ಉದಾಹರಣೆಗೆ, ಫಾರಂಗಳಲ್ಲಿ ಬಳಸುವ ತೆಂಗಿನ ನಾರಿನ ಬೆಲೆ ಪ್ರತಿ ಟ್ರ್ಯಾಕ್ಟರ್ ಲೋಡ್‌ಗೆ ಹಿಂದೆ 3,000 ರೂ. ಇದ್ದದ್ದು ಈಗ 22,000 ರೂ.ಗೆ ಏರಿಕೆಯಾಗಿದೆ. ಹೀಗಾಗಿ, ಸಾಕಣೆದಾರರು ಬ್ರಾಯ್ಲರ್ ಕೋಳಿಗೆ ಪ್ರತಿ ಕೆಜಿಗೆ 20 ರೂ., ನಾಟಿ ಕೋಳಿಗೆ 25 ರೂ. ಮತ್ತು ಕೌಜಗ ಹಕ್ಕಿಗೆ 7 ರೂ. ದರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಅಲ್ಲದೆ, ಫೀಡ್ ಕನ್ವರ್ಶನ್ ರೇಶಿಯೋ (ಎಫ್‌ಸಿಆರ್‌) ಪದ್ಧತಿಯನ್ನು ರದ್ದುಗೊಳಿಸಬೇಕು ಮತ್ತು ಕೋಳಿ ಸಾಕಣೆದಾರರಿಗೆ ಕಲ್ಯಾಣ ಮಂಡಳಿ ರಚಿಸಬೇಕು ಎಂಬುದು ಇವರ ಹಕ್ಕೊತ್ತಾಯವಾಗಿದೆ.

ತಮಿಳುನಾಡಿನ ಪಲ್ಲಡಂ ಮತ್ತು ನಾಮಕ್ಕಲ್ ಭಾಗಗಳಿಂದ ಬೆಂಗಳೂರು ಹಾಗೂ ಕರ್ನಾಟಕದ ಇತರ ಭಾಗಗಳಿಗೆ ದಿನನಿತ್ಯ ಭಾರೀ ಪ್ರಮಾಣದ ಕೋಳಿ ಮಾಂಸ ಪೂರೈಕೆಯಾಗುತ್ತದೆ. ಮುಷ್ಕರದ ಹಿನ್ನೆಲೆಯಲ್ಲಿ ಈ ಪೂರೈಕೆ ಸರಪಳಿ ಈಗ ತುಂಡಾಗಿದೆ. ಇದರ ಪರಿಣಾಮ ಡಿಸೆಂಬರ್‌ನಲ್ಲಿ ಕೆಜಿಗೆ 200-240 ರೂ. ಇದ್ದ ಕೋಳಿ ಮಾಂಸದ ಬೆಲೆ ಇದೀಗ 300 ರಿಂದ 320 ರೂ.ವರೆಗೆ ತಲುಪಿದೆ. ಒಂದೊಮ್ಮೆ ಮುಷ್ಕರ ನಿಲ್ಲದೇ ಹೋದಲ್ಲಿ ಈ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

You may also like