2
BJP: ಧರ್ಮಸ್ಥಳ ಕ್ಷೇತ್ರದ ಕುರಿತು ನಿರಂತರ ಅಪಪ್ರಚಾರ ಮಾಡಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಆ.17 ರಂದು ರವಿವಾರ ಬೆಳಗ್ಗೆ ರಾಜ್ಯ ಬಿಜೆಪಿ ( BJP) ನಿಯೋಗ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.
ಈ ವೇಳೆ ವಿಜಯೇಂದ್ರ ಮಾತನಾಡಿ, ಬಿಜೆಪಿಯು ಎಸ್ ಐಟಿ ತನಿಖೆಯನ್ನು ಪ್ರಾರಂಭದಲ್ಲೇ ಸ್ವಾಗತಿಸಿದ್ದು, ಅದರ ಮಧ್ಯಂತರ ವರದಿಯನ್ನು ಸರಕಾರ ಮಂಡಿಸಬೇಕು ಎಂದು ಸದನದಲ್ಲಿ ಆಗ್ರಹಿಸಲಾಗಿದೆ. ಕ್ಷೇತ್ರದ ಅಪಪ್ರಚಾರ ಮಾಡುವ ಕುರಿತು ಕೂಡ ಸರಕಾರ ಸಮಗ್ರವಾಗಿ ತನಿಖೆ ನಡೆಸುವ ಕಾರ್ಯವನ್ನು ಮಾಡಬೇಕು, ತನಿಖೆಯ ಭರದಲ್ಲಿ ಕ್ಷೇತ್ರದ ಬಗ್ಗೆ ಅಪಪ್ರಚಾರ ಸಲ್ಲದು, ಅಸಂಖ್ಯಾತ ಭಕ್ತರಲ್ಲಿ ಗೊಂದಲ ಸೃಷ್ಟಿಸುವ ಷಡ್ಯಂತ್ರ ನಡೆಯುತ್ತಿದೆ. ಆದ್ದರಿಂದ ರಾಜ್ಯದ ಜನತೆಯಲ್ಲಿ ಮುಖ್ಯ ಮಂತ್ರಿಗಳು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
