Vittal Acharya: ಸಂಘ ಪರಿವಾರದಲ್ಲಿ ಜೀವ ತೇಯ್ದು, ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಭೀಷ್ಮ ಎಂದೇ ಖ್ಯಾತಿ ಪಡೆದಿರುವ 92 ವರ್ಷದ ವಿಟ್ಠಲ ಆಚಾರ್ಯ(Vittal Acharya ) ಅವರು, ಮಕ್ಕಳು ಮಾಡಿದ ಮೋಸ ದಿಂದ ಬೀದಿಯಲ್ಲಿ ವಾಸ ಮಾಡುವಂತಾಗಿದೆ.
ಹೌದು, 7ನೇ ವಯಸ್ಸಿಗೆ ಆರೆಸ್ಸೆಸ್ ಸೇರಿ ಸಂಘಕ್ಕಾಗಿ ಜೀವ ತೇಯ್ದ ಜೀವ, ಚಿಕ್ಕಮಗಳೂರು(Chikkamagaluru ) ಜಿಲ್ಲಾ ಬಿಜೆಪಿಯ ಭೀಷ್ಮ ಎಂದೇ ಖ್ಯಾತಿ ಪಡೆದಿರುವ ವಿಠಲ್ ಆಚಾರ್ಯ ಅವರು ಇಂದು ಮಕ್ಕಳ ಮೋಸದಿಂದ 92ನೇ ಇಳಿವಯಸ್ಸಿನಲ್ಲಿ ಬೀದಿಯಲ್ಲಿ ವಾಸ ಮಾಡುತ್ತಿದ್ದಾರೆ. ನಾಲ್ಕು ಗಂಡು, ಒಂದು ಹೆಣ್ಣು ಮಗುವಿದ್ದು ಎಲ್ಲರೂ ಡಾಕ್ಟ್ರು-ಇಂಜಿನಿಯರ್. ಕೊಟ್ಯಾಂತರ ಆಸ್ತಿ ಇದ್ರು ಇಂದು ಅನಾಥರಾಗಿ ಸಂಧ್ಯಾಕಾಲವನ್ನ ಬೀದಿಬದಿ ಕಳೆಯುತ್ತಿದ್ದಾರೆ.
ವಿಠಲ್ ಆಚಾರ್ಯ ಅವರು ಉಡುಪಿ(Udupi) ಜಿಲ್ಲೆಯವರು, ಚಿಕ್ಕಮಗಳೂರು ಜಿಲ್ಲೆ ಅವರ ಕರ್ಮ ಭೂಮಿ. ಅನೇಕ ದಶಕಗಳಿಂದ ಜಿಲ್ಲೆಯಲ್ಲಿ ವಾಸವಿರುವ ಅವರು ಆರ್ ಎಸ್ ಎಸ್ ಕಟ್ಟಾಳು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಯಡಿಯೂರಪ್ಪ, ಪಿಜಿಆರ್ ಸಿಂಧ್ಯಾ, ಶಂಕರಮೂರ್ತಿ, ಕಲ್ಲಡ್ಕ ಪ್ರಭಾಕರ ಭಟ್ ಜತೆ ಬೆಳಗಾವಿ, ಬಳ್ಳಾರಿ ಜೈಲು ಸೇರಿದ್ದರು. ಇವರ ಶಿಷ್ಯಂದಿರೇ ಸಿ.ಟಿ.ರವಿ, ಸುನೀಲ್ ಕುಮಾರ್. 7ನೇ ವಯಸ್ಸಿಗೆ ಆರ್.ಎಸ್.ಎಸ್. ಸೇರಿ ಸಂಘಕ್ಕಾಗಿ ಜೀವ ತೇಯ್ದ ಹಿರಿಜೀವ. ಬದುಕಿನಲ್ಲಿ 107 ಪ್ರಕೃತಿ ಯಜ್ಞ ಮಾಡಿರೋ ಈ ಜೀವಕ್ಕೆ ಅದು ನಿಲ್ಲಲೇಬಾರದು ಅನ್ನೋದು ಬಯಕೆ. ಅದಕ್ಕಾಗಿ 25 ಲಕ್ಷ ಹಣವಟ್ಟು ಸೈಟ್ ಕೂಡ ಮಾರೋದಕ್ಕೆ ಸಿದ್ಧವಿದೆ ಈ ಜೀವ. ಆದ್ರಿಂದು ಅನಾಥವಾಗಿ ಬೀದಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಸಧ್ಯ ಇವರಿಗೆ ಹೆತ್ತಮಕ್ಕಳೇ ಮೋಸ ಮಾಡಿದ್ದಾರಂತೆ. ಮಕ್ಕಳೇ ಮೋಸ ಮಾಡಿದ್ದಾರೆಂದು ಅವರ ಅನ್ನ ನನಗೆ ಬೇಡ ಅಂತ ಮನೆ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ಮಾಡ್ತಿದ್ದಾರೆ. ಒಟ್ಟಾರೆ, ಇವ್ರಿಗೆ ಇರೋ ಮಕ್ಕಳೆಲ್ಲರೂ ಸಿರಿವಂತರೆ. ಆದರೂ, ಈ ಇಳಿವಯಸ್ಸಿನಲ್ಲಿ ಮಕ್ಕಳ ಮನೆಗೆ ಹೋಗದೇ ಬೇರೆಡೆ ಇದ್ದು 84 ವರ್ಷ ಆಗೋವರೆಗೂ ಹೇಗೋ ಪ್ರಕೃತಿ ಯಜ್ಞ ಮಾಡಿದ್ದಾರೆ. ಆದರೀಗ ತಾನೇ ಕಷ್ಟ ಪಟ್ಟು ಮಾಡಿದ್ದ ಜಾಗ ಇಲ್ಲ. ಆ ಜಾಗ ಟ್ರಸ್ಟ್ಗೆ ಕೊಡಲೇಬೇಕು. ಪ್ರತಿವರ್ಷ ಪ್ರಕೃತಿಯಜ್ಞ ನಡೆಯಲೇಬೇಕು. ನಿಲ್ಲಬಾರದು ಅಂತ ಬೀದಿಯಲ್ಲಿ ಕುಳಿತು ಹೋರಾಟ ಮಾಡುವಂತಾಗಿರೋದು ನಿಜಕ್ಕೂ ದುರಂತ.
ಇಷ್ಟೇ ಅಲ್ಲದೆ ಇವರು ದತ್ತಪೀಠ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರೂ. ಇವರಿಗೆ ನಾಲ್ಕು ಜನ ಗಂಡು ಮಕ್ಕಳು, ಒಂದು ಹೆಣ್ಣುಮಗು ಎಲ್ಲಾರೂ ಡಾಕ್ಟರ್, ಇಂಜಿನಿಯರ್ ಉನ್ನತ ಹುದ್ದೆ ಯಲ್ಲಿದ್ದು ಕೌಟುಂಬಿಕ ಕಲಹದಿಂದ ಸಂಧ್ಯಾಕಾಲದಲ್ಲಿ ಬೀದಿಯಲ್ಲಿ ಬದುಕು ಕಳೆಯುವಂತಾಗಿದೆ. ಮಕ್ಕಳೇ ಮೋಸ ಮಾಡಿದ್ದಾರೆ. ಅವರ ಅನ್ನ ನನಗೆ ಬೇಡವೆಂದು ಮನೆ ಮುಂದೇ ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.
