Home » Chikkamagaluru: ಹುಡುಗಿಗಾಗಿ ಬುರ್ಖಾ ಧರಿಸಿ, ಭಿಕ್ಷೆ ಬೇಡುತ್ತಾ ಚಿಕ್ಕಮಗಳೂರಿಗೆ ಬಂದ ಯುವಕ- ಸ್ಥಳೀಯರಿಂದ ಹಿಗ್ಗಾಮುಗ್ಗಾ ಥಳಿತ !!

Chikkamagaluru: ಹುಡುಗಿಗಾಗಿ ಬುರ್ಖಾ ಧರಿಸಿ, ಭಿಕ್ಷೆ ಬೇಡುತ್ತಾ ಚಿಕ್ಕಮಗಳೂರಿಗೆ ಬಂದ ಯುವಕ- ಸ್ಥಳೀಯರಿಂದ ಹಿಗ್ಗಾಮುಗ್ಗಾ ಥಳಿತ !!

0 comments

Chikkamagaluru: ಯುವಕನೊಬ್ಬ ಹುಡುಗಿಗಾಗಿ ಬುರ್ಖಾ ಧರಿಸಿ ಚಿಕ್ಕಮಗಳೂರಿಗೆ ಬಂದು ಭಿಕ್ಷೆ ಬೇಡುತ್ತಾ, ಅಲೆಯುತ್ತಾ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ಘಟನೆ ಚಿಕ್ಕಮಗಳೂರು(Chikkamagaluru) ನಗರದಲ್ಲಿ ನಡೆದಿದೆ.

ಹೌದು, ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ(Mallandoor Road) ಬೆರಳಿಗೆ ನೈಲ್ ಪಾಲಿಶ್ ಹಚ್ಚಿಕೊಂಡು ಶೃಂಗಾರ ಮಾಡಿಕೊಂಡು ಚಾಕು ಇಟ್ಟುಕೊಂಡ ಯುವಕನ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬುರ್ಖಾ ತೊಟ್ಟು ನಗರದ ಮಲ್ಲಂದೂರು ರಸ್ತೆಯಲ್ಲಿ ಯುವಕನ ಓಡಾಟ ನಡೆಸುವಾಗ ಅನುಮಾನಗೊಂಡು ಜನರು ಹಿಡಿದಿದ್ದಾರೆ. ಬಳಿಕ ಇದು ಹುಡುಗಿ, ಹೆಂಗಸು ಯಾವುದೂ ಅಲ್ಲ, ಮೀಸೆ ಇರೋ ಹರೀಶ(Harisha), ಬಾಳೆಹೊನ್ನೂರಿನವನು (Balehonnuru) ಎಂದು ತಿಳಿದುಬಂದಿದೆ. ಬಳಿಕ ಎಲ್ಲರೂ ಸೇರಿ

ಅಂದಹಾಗೆ ಬುರ್ಖಾದೊಳಗಿರುವುದು ಹುಡುಗಿ ಅಲ್ಲ ಹುಡುಗ ಎನ್ನುವುದು ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಯಾಕೆ ಬುರ್ಖಾ ಧರಿಸಿ ಓಡಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಆಗ ಆತ ಹುಡುಗಿಯನ್ನು ನೋಡಲು ಬುರ್ಖಾ ಧರಿಸಿ ಬಂದಿರುವುದಾಗಿ ಆತ ಹೇಳಿದ್ದಾನೆ. ಅಲ್ಲದೆ ಹುಡುಗಿಗಾಗಿ ಬಾಳೆಹೊನ್ನೂರಿನಲ್ಲಿ ಈತ ಬುರ್ಖಾ ಖರೀದಿಸಿದ್ದನಂತೆ, ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ಚಿಕ್ಕಮಗಳೂರು ಬಸವನಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

You may also like

Leave a Comment