2
Chikkamagaluru: ಕೋಳಿಗಳಿಗೆ ವಿಷವಿಟ್ಟು ಸಾಯಿಸಿದ ಅಮಾನವೀಯ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ವರ್ಕಾಟೆ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರದೀಪ್ ಹಾಗೂ ಬಿಷ್ಮಯ್ಯ ಗೌಡ ಎಂಬುವವರಿಗೆ ಸೇರಿದ ಎರಡು ಹುಂಜ ಹಾಗೂ ಒಂದು ಕೋಳಿಯನ್ನು ದುಗ್ಗಪ್ಪ ಎಂಬುವವರು ವಿಷ ನೀಡಿ ಸಾಯಿಸಿದ ಆರೋಪವಿದೆ.
ತೋಟಕ್ಕೆ ಕೋಳಿಗಳು ಬಂದಿದೆ ಎಂಬ ಕಾರಣಕ್ಕೆ ಕೋಳಿಗಳಿಗೆ ಅಕ್ಕಿ ಮತ್ತು ಭತ್ತದಲ್ಲಿ ವಿಷ ಬೆರೆಸಿ ನೀಡಲಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಬಿಷಯ್ಯರವರ ಪತ್ನಿ ಈ ಕೃತ್ಯವನ್ನು ನೋಡಿರುವುದಾಗಿ ವರದಿಯಾಗಿದೆ. ಈ ಕುರಿತು ಅವರು ತಮ್ಮ ಪುತ್ರ, ಹಾಗೂ ಹಕ್ಕುಸ್ವಾಮಿಗೆ ಹೇಳಿದ್ದಾರೆ. ಇದರಿಂದ 4500 ರೂ. ನಷ್ಟವಾಗಿದೆ ಎಂದು ಪ್ರದೀಪ್ ಹಾಗೂ ಬಿಷಯ್ಯ ಅವರು ಪೊಲೀಸರಿಗೆ ದೂರನ್ನು ನೀಡಿದ್ದಾರೆ.
