Home » ಹಾಡಹಗಲೇ ಕಾಫೀನಾಡಿನಲ್ಲಿ ಮಾರಕಾಸ್ತ್ರಗಳ ಸದ್ದು!! ಪೂರ್ವದ್ವೇಷದ ಹಿನ್ನೆಲೆ ಬೈಕಿನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ತಂಡದಿಂದ ದಾಳಿ

ಹಾಡಹಗಲೇ ಕಾಫೀನಾಡಿನಲ್ಲಿ ಮಾರಕಾಸ್ತ್ರಗಳ ಸದ್ದು!! ಪೂರ್ವದ್ವೇಷದ ಹಿನ್ನೆಲೆ ಬೈಕಿನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ತಂಡದಿಂದ ದಾಳಿ

0 comments

ಮೂಡಿಗೆರೆ:ಬೈಕಿನಲ್ಲಿ ತೆರಳುತ್ತಿದ್ದ ಯುವಕನೋರ್ವನ ಮೇಲೆ ಹಾಡಹಗಲೇ ದುಷ್ಕರ್ಮಿಗಳ ತಂಡವೊಂದು ಕತ್ತಿಯಿಂದ ಕಡಿದು ಗಂಭೀರ ಹಲ್ಲೆ ನಡೆಸಿದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ.

ಗಾಯಗೊಂಡ ಯುವಕನನ್ನು ಮೇಕನಗದ್ದೆ ನಿವಾಸಿ ಕಿರಣ್ ಎಂದು ಗುರುತಿಸಲಾಗಿದ್ದು, ಮೂಡಿಗೆರೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಿರಣ್ ತನ್ನ ಬೈಕಿನಲ್ಲಿ ಮೂಡಿಗೆರೆಯ ಗೋಣಿಬೀಡು ಆನೆದಿಬ್ಬ ಬಳಿ ತೆರಳುತ್ತಿರುವಾಗ ಏಕಾಏಕಿ ಎದುರಾದ ಇಬ್ಬರು ದುಷ್ಕರ್ಮಿಗಳು ಭೀಕರವಾಗಿ ಕತ್ತಿ ಝಳಪಿಸಿದ್ದು, ಪರಿಣಾಮ ಕಿರಣ್ ಕೈ ಕಾಲಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

You may also like

Leave a Comment