Home » Child Assault: 3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕಿ

Child Assault: 3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕಿ

0 comments
Crime

Child Assault: ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯವೊಂದು ಜರುಗಿದ್ದು, 3 ವರ್ಷದ ಬಾಲಕಿ ಮೇಲೆ ಶಿಕ್ಷಕಿಯೇ ಲೈಂಗಿಕ ದೌರ್ಜನ್ಯ ಎಸಗಿರುವ ಘೋರ ಘಟನೆಯೊಂದು ವರದಿಯಾಗಿದೆ.

KOCHIMUL: ರೈತರಿಗೆ ಬಿಗ್ ಶಾಕ್ – ಹಾಲು ಖರೀದಿ ದರದಲ್ಲಿ 2 ರೂ ಕಡಿತ !!

ವೆಂಕಟೇಶ್ವರಪುರದ ಅನ್ವರ್‌ ಲೇಔಟ್‌ನ ಖಾಸಗಿ ಶಾಲೆಯಲ್ಲಿ ನರ್ಸರಿ ಓದುತ್ತಿದ್ದ 3 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು ಹೇಳಲಾಗಿದೆ. ಶಾಲೆಯ ಶಿಕ್ಷಕಿಯಿಂದ ಈ ಹೇಯ ಕೃತ್ಯ ನಡೆದಿದೆ ಎನ್ನಲಾಗಿದೆ.

ಮಗುವಿನ ಖಾಸಗಿ ಭಾಗದಲ್ಲಿ ರಕ್ತಸ್ರಾವವಾಗಿ ಮಗು ನಡೆಯಲು ಆಗದೆ ಕಷ್ಟ ಪಡುತ್ತಿತ್ತು. ಅಷ್ಟೇ ಅಲ್ಲದೇ ಶಾಲೆಗೆ ಹೋಗುವುದಿಲ್ಲ ಎಂದು ರಚ್ಚೆ ಹಿಡಿತಿತ್ತು. ಇದನ್ನು ಗಮನಿಸಿದ ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಗಮನಕ್ಕೆ ಬಂದಿದೆ ಎಂದು ವರದಿಯಾಗಿದೆ.

ಇದೀಗ ಪೋಷಕರು ಕೆಜೆ ಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

Mangaluru Landslide: ಮಂಗಳೂರು ಮಣ್ಣು ಕುಸಿತ ಪ್ರಕರಣ; ಮೂವರ ವಿರುದ್ಧ ಎಫ್‌ಐಆರ್‌ ದಾಖಲು

You may also like

Leave a Comment