Home » ಕೇರಳದಲ್ಲಿ ನಡೆಯಿತು ಬಾಲ್ಯವಿವಾಹ!! 25ರ ಯುವಕನೊಂದಿಗೆ ಅಪ್ರಾಪ್ತೆಯನ್ನು ಮದುವೆ ಮಾಡಿಸಿದ ಪ್ರಕರಣ ತಡವಾಗಿ ಬೆಳಕಿಗೆ

ಕೇರಳದಲ್ಲಿ ನಡೆಯಿತು ಬಾಲ್ಯವಿವಾಹ!! 25ರ ಯುವಕನೊಂದಿಗೆ ಅಪ್ರಾಪ್ತೆಯನ್ನು ಮದುವೆ ಮಾಡಿಸಿದ ಪ್ರಕರಣ ತಡವಾಗಿ ಬೆಳಕಿಗೆ

0 comments

ದೇವರನಾಡು ಎಂದೇ ಪ್ರಸಿದ್ಧಿ ಪಡೆದ ಕೇರಳ ರಾಜ್ಯದಲ್ಲಿ ಬಾಲ್ಯ ವಿವಾಹವೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಲವರ ವಿರುದ್ಧ ಪ್ರಕರಣ ದಾಖಲಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.

ಘಟನೆ ವಿವರ:ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಯುವತಿಯನ್ನು ಅದೇ ಸಮುದಾಯದ 25ರ ಯುವಕನೊಂದಿಗೆ ಮದುವೆ ನಡೆಸಲಾಗಿತ್ತು. ಒಂದು ವಾರದ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸುಳಿವು ಸಿಕ್ಕ ಕೂಡಲೇ ಪೊಲೀಸರು ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸುವ ಕಾರ್ಯ ನಡೆಸಿದ್ದು, ಮದುವೆಯಲ್ಲಿ ಪಾಲ್ಗೊಂಡ ಕ್ಯಾಮರಾಮನ್, ಅಡುಗೆ ತಯಾರಕರು, ಅಥಿತಿಗಳ ಸಹಿತ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಸದ್ಯ ಬಾಲಕಿಯ ಮಾನಸಿಕ ಸ್ಯಾಸ್ತ್ಯ ಕಾಪಾಡುವ ದೃಷ್ಟಿಯಿಂದ ಯಾರನ್ನು ಕೂಡಾ ಬಂಧಿಸದಿದ್ದರೂ ಅವರ ಮೇಲೊಂದು ನಿಗಾ ಇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಬಾಲಕಿಯನ್ನು ಪೋಷಕರೊಂದಿಗೆ, ಆಕೆಯ ಮನೆಯಲ್ಲೇ ಬಿಡಲಾಗಿದೆ.

You may also like

Leave a Comment