Home » Mangalore: ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣ: ಮಗುವಿನ ಡಿಎನ್ಎ ರಿಪೋರ್ಟ್ ನಲ್ಲಿ ಅಸಲಿ ಸತ್ಯ ಬಹಿರಂಗ

Mangalore: ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣ: ಮಗುವಿನ ಡಿಎನ್ಎ ರಿಪೋರ್ಟ್ ನಲ್ಲಿ ಅಸಲಿ ಸತ್ಯ ಬಹಿರಂಗ

0 comments

Mangalore: ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣವೊಂದು, ಎರಡು ತಿಂಗಳ ಹಿಂದೆ ಭಾರಿ ಗೊಂದಲಕ್ಕೆ ಆಸ್ಪದವಾಗಿತ್ತು. ಆದ್ರೆ ಇದೀಗ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಆರೋಪ ಪ್ರಕರಣಕ್ಕೆ ಒಂದು ಅಂತಿಮ ಉತ್ತರ ದೊರಕಿದೆ.

ಹೌದು, ಅದಲು ಬದಲು ಮಾಡಲಾಗಿದೆ ಎಂದ ಮಗುವಿನ ಡಿಎನ್ಎ ರಿಪೋರ್ಟ್ ಸಲ್ಲಿಕೆಯಾಗಿದ್ದು, ಸಂತ್ರಸ್ತೆಯ ಮಗು ಅದೇ ಅನ್ನುವುದು ಇದೀಗ ಡಿಎನ್ಎ ವರದಿಯಲ್ಲಿ ಬಹಿರಂಗವಾಗಿದೆ.

ಮಾಹಿತಿ ಪ್ರಕಾರ, ಅಕ್ಟೋಬರ್ 18 ರಂದು ಪಾಣೆಮಂಗಳೂರು ನಿವಾಸಿ, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಸಂತ್ರಸ್ತೆ ಎರಡನೇ ಹೆರಿಗೆಗಾಗಿ ಲೇಡಿಗೋಷನ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಅಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದ್ರೆ ಹುಟ್ಟಿದ ಮಗು ನಾರ್ಮಲ್ ಆಗಿದೆ ಎಂದು ಹೇಳಿದ ಕೆಲವು ತಾಸಿನ ನಂತರ ಮಗುವಿಗೆ ಉಸಿರಾಟದ ತೊಂದರೆ ಇರುವುದಾಗಿ ನವಜಾತ ಶಿಶು ತೀವ್ರ ನಿಗಾ ಘಟಕ (ಎನ್ ಎಸ್ ಯು ಐ) ಗೆ ದಾಖಲಿಸಲಾಗಿತ್ತು. ಮರುದಿವಸ ಬಂದು ಮಗುವಿಗೆ ಒಂದು ಕಣ್ಣಿನ ಸಮಸ್ಯೆ ಇದೆ ಎಂದು ಹೇಳಿದ್ದರು. ಹೀಗೆ ಮೂರು ರೀತಿಯಲ್ಲಿ ಡಾಕ್ಟರ್ ಗಳು ಮಾತು ಬದಲಾಯಿಸಿದ್ದು, ತಾಯಿ ಮಗುವಿನ ಭೇಟಿಗೆ ಅವಕಾಶ ನೀಡದ ಕಾರಣ ಆಸ್ಪತ್ರೆಯ ನಡೆಯ ಬಗ್ಗೆ ಹೆತ್ತ ತಾಯಿಗೆ, ಮತ್ತು ಕುಟುಂಬದವರಿಗೆ ಸಂಶಯ ಮೂಡಲು ಅವಕಾಶ ಮಾಡಿತ್ತು. ಈ ಹಿನ್ನಲೆಯಲ್ಲಿ ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣ ಕೆಲವು ವರ್ಷಗಳಿಂದ ಆರೋಪಗಳು ಕೇಳಿ ಬರುತ್ತಿರುವುದರಿಂದ, ಆಸ್ಪತ್ರೆಯ ನಿರ್ಲಕ್ಷ್ಯ ವಿರುದ್ಧ ಉನ್ನತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಇದೀಗ ಈ ಬಗ್ಗೆ ಲೇಡಿಗೋಷನ್‌ ಅಧೀಕ್ಷಕ ಅವರು ಮಾಧ್ಯಮಗಳಿಗೆ ಅಂದೇ ಸ್ಪಷ್ಟನೆ ನೀಡಿದ್ದು, ಆಗಸ್ಟ್ 20ರಂದು ಬೆಳಗ್ಗೆ ಈ ಬಗ್ಗೆ ಮಗುವಿನ ಪೋಷಕರಿಗೆ ವಿಷಯ ತಿಳಿಸಿದ್ದು ಮಕ್ಕಳ ಕಣ್ಣಿನ ತಜ್ಞರು ಅಲ್ಟ್ರಾಸೌಂಡ್‌ ತಪಾಸಣೆ ನಡೆಸಿದಾಗ ಮಗುವಿನ ಕಣ್ಣು ಗುಡ್ಡೆ ಜನನದ ವೇಳೆಯೇ ಇಲ್ಲದಿರುವುದು ಕಂಡು ಬಂದಿದೆ. ಸಂಜೆ ಪೋಷಕರಿಗೆ ತಿಳಿಸಿದಾಗ ಅವರು ಆತಂಕಕ್ಕೊಳಗಾಗಿದ್ದಾರೆ. ಇನ್ನು ಈ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಜನಿಸಿದ ಮಗುವಿಗೆ ತೊಂದರೆ ಇಲ್ಲದಾಗ ತಾಯಿ ಜತೆ ಮಗುವಿನ ಫೋಟೋ ತೆಗೆಯುವ ವ್ಯವಸ್ಥೆಯೂ ಇದೆ. ಒಂದು ವೇಳೆ ತೊಂದರೆ ಇದ್ದು ಎನ್‌ಎಸ್‌ಯುಐಗೆ ಶಿಫ್ಟ್‌ ಮಾಡುವಾಗ ಅಲ್ಲಿಯೂ ಮಗುವಿಗೆ ಹೆರಿಗೆ ವೇಳೆ ಹಾಕಲಾಗುವ ಟ್ಯಾಗ್‌, ಕೇಸ್‌ ಶೀಟ್‌ ಇಟ್ಟು ಫೋಟೋ ನಮ್ಮ ಸಿಸ್ಟಮ್‌ಗಳಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಈ ಪ್ರಕರಣದಲ್ಲಿ ಈ ಎಲ್ಲಾ ದಾಖಲೆಗಳು ಇವೆ. ಅದಲ್ಲದೆ, ಹೆರಿಗೆ ರೂಂನಿಂದ ಹೆಚ್ಚಿನ ಚಿಕಿತ್ಸೆಗಾಗಿ ಎನ್‌ಎಸ್‌ಯುಐಗೆ ಶಿಫ್ಟ್ ಮಾಡುವ ವೇಳೆಯೂ ಸಿಸಿಟಿವಿ ಫೂಟೇಜ್‌ ದಾಖಲೆಯೂ ಆಸ್ಪತ್ರೆಯಲ್ಲಿದೆ. ಮುಖ್ಯವಾಗಿ ಇದೀಗ ಸಂತ್ರಸ್ತೆಯ ಮಗುವಿನ ಡಿಎನ್ಎ ಪರೀಕ್ಷೆ ವರದಿ ಸಂಬಂಧ ಪಟ್ಟ ಇಲಾಖೆಯ ಕೈ ಸೇರಿದ್ದು, ಸಂತ್ರಸ್ತೆಯ ಹೆಣ್ಣು ಮಗು ಆಕೆಯದ್ದೇ, ಆಸ್ಪತ್ರೆಯಲ್ಲಿ ಯಾವುದೇ ಮಗುವಿನ ಅದಲು ಬದಲಾಗಿಲ್ಲ, ಇದು ಒಂದು ಗೊಂದಲ ವಿಚಾರ ಎನ್ನಲಾಗಿದೆ.

You may also like

Leave a Comment