Chinnaswamy Stadium Stampede: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವಿಗೀಡಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಂದಿನ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ಸೇರಿ ಐದು ಮಂದಿ ಪೊಲೀಸ್ ಅಧಿಕಾರಿಗಳನ್ನು ಸರಕಾರ ಅಮಾನತು ಮಾಡಿತ್ತು. ಇದೀಗ ಸರಕಾರದ ಈ ನಿರ್ಧಾರವನ್ನು ನ್ಯಾಯಮಂಡಳಿ ಪ್ರಶ್ನೆ ಮಾಡಿದ್ದು, ಸರಕಾರಕ್ಕೆ ಚಾಟಿ ಬೀಸಿದೆ.
ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರು ತಮ್ಮ ಅಮಾನತು ಮಾಡಿದ ಸರಕಾರದ ಆದೇಶವನ್ನು ಪ್ರಶ್ನೆ ಮಾಡಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯ ವಿಚಾರಣೆ ಮಾಡಿದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ, ಮ್ಯಾಜಿಸ್ಟೀರಿಯಲ್ ತನಿಖೆ ವರದಿ ಬರುವ ಮುನ್ನ ಅಮಾನತು ಮಾಡಿದ್ದೇಕೆ? ಸಂಭ್ರಮಾಚರಣೆಯನ್ನು ಮಾಡಲು ಪೊಲೀಸರು ಅನುಮತಿ ನೀಡಿಲ್ಲ, ಅಧಿಕಾರಿಗಳ ಅಮಾನತಿಗೆ ಆಧಾರವೇನು ಎಂದು ರಾಜ್ಯ ಸರಕಾರವನ್ನು ಪ್ರಶ್ನೆ ಮಾಡಿ, ಸಿಎಟಿ ಆದೇಶವನ್ನು ಕಾಯ್ದಿರಿಸಿದೆ.
