Home » Bengaluru Tragedy: ಚಿನ್ನಸ್ವಾಮಿ ಸ್ಟೇಡಿಯಂ ದುರಂತ: ನಾಳೆ ಕರಾಳ ದಿನಾಚರಣೆಗೆ ವಾಟಾಳ್ ನಾಗರಾಜ್ ಕರೆ

Bengaluru Tragedy: ಚಿನ್ನಸ್ವಾಮಿ ಸ್ಟೇಡಿಯಂ ದುರಂತ: ನಾಳೆ ಕರಾಳ ದಿನಾಚರಣೆಗೆ ವಾಟಾಳ್ ನಾಗರಾಜ್ ಕರೆ

0 comments

Bengaluru Tragedy: ಬೆಂಗಳೂರು ಕ್ರಿಕೆಟ್ ತಂಡ ಆರ್ಸಿಬಿ ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ, ವಿಜಯೋತ್ಸವಕ್ಕೆ ಬಂದಿದ್ದ 11 ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ದುರ್ಘಟನೆ ಹಿನ್ನೆಲೆ, ನಾಳೆ ಕರಾಳ ದಿನಾಚರಣೆಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ನಾಳೆ ಅಂದರೆ ದಿನಾಂಕ 07-06-2025ರ ಶನಿವಾರದಂದು ಮಧ್ಯಾಹ್ನ 12.30ಕ್ಕೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರಾಳ ದಿನಾಚರಣೆ ಮಾಡಲಾಗುತ್ತದೆ ಎಂದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಮಾಯಕರ ಸಾವಾಗಿದೆ. ಈ ಸಾವಿಗೆ ಕಾರಣ ಯಾರು? ಇದನ್ನು ನಾವು ಬಹಳ ಗಂಭೀರವಾಗಿ ರಾಜಕೀಯ ರಹಿತವಾಗಿ ಚಿಂತನೆ ಮಾಡಬೇಕಾಗಿದೆ. ತಪ್ಪಿತಸ್ಥರು ಯಾರೇ ಇರಲಿ ಅದು ಅಪರಾಧಿ ಸ್ಥಾನದಲ್ಲಿ ನಿಲ್ಲಲೇಬೇಕು.

ಬಹಳ ಮುಖ್ಯವಾಗಿ ಆರ್‌ಸಿಬಿ ವಿಜಯೋತ್ಸವ ಮೆರವಣಿಗೆ ಸಮಾರಂಭ ನಡೆಸಲು ತೀರ್ಮಾನಿಸಿದವರು ಯಾರು? ಇದು ಬಹಳ ಮುಖ್ಯ ನಮ್ಮ ರಾಜ್ಯದ ಗುಪ್ತಚರ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿರುವುದು ಸತ್ಯ. ಈ ಸಮಾರಂಭ ವ್ಯವಸ್ಥೆಗೆ ಯಾರು ಅನುಮತಿ ನೀಡಿದ್ದು, ಯಾರಿಗಾಗಿ ಈ ಸಮಾರಂಭ ಆಯೋಜಿಸಲಾಗಿತ್ತು. 11 ಜನರ ಸಾವಿಗೆ ಯಾರು ಕಾರಣ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

You may also like