Home » ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ – ಬೆಂಗಳೂರಿನ ಎಳೆಯ ಜೋಡಿ ಸೇರಿ ಮೂವರ ಸಾವು

ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ – ಬೆಂಗಳೂರಿನ ಎಳೆಯ ಜೋಡಿ ಸೇರಿ ಮೂವರ ಸಾವು

0 comments

ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಸೀಬಾರ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಮೃತರನ್ನು ಬೆಂಗಳೂರು ಮೂಲದ ಭೂಮಿಕಾ(22) ಸಿಂಚನ(24) ಮನೀಷ್(27) ಎಂದು ಗುರುತಿಸಲಾಗಿದೆ. ಘಟನೆ ವೇಳೆ ಮನೀಷ್, ಸಿಂಚನ ದಂಪತಿ, ಹಾಗೂ ಮನೀಷ್ ಸಹೋದರಿ ಭೂಮಿಕಾ ದುರ್ಮರಣ ಹೊಂದಿದ್ದಾರೆ. ಉಳಿದಂತೆ ಗಿರಿಧರ್, ಆಶಾ ಹಾಗೂ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಇದೀಗ ಗಾಯಾಳುಗಳನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

You may also like

Leave a Comment