Home » Cinema News: ಪ್ರಭಾಸ್ ನಟನೆಯ ‘ರಾಜಾ ಡಿಲಕ್ಸ್’ ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆಯಾದ ಕೇರಳದ ಸೆನ್ಸೇಷನಲ್ ನಟಿ ಮಾಳವಿಕಾ ಮೋಹನ್

Cinema News: ಪ್ರಭಾಸ್ ನಟನೆಯ ‘ರಾಜಾ ಡಿಲಕ್ಸ್’ ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆಯಾದ ಕೇರಳದ ಸೆನ್ಸೇಷನಲ್ ನಟಿ ಮಾಳವಿಕಾ ಮೋಹನ್

1 comment
Cinema News

ಮಲೆಯಾಳಂ ನಟಿ ಮಾಳವಿಕಾ ಮೋಹನ್ ಅವರು ತಮ್ಮ ಕಣ್ಣು ಕುಕ್ಕುವ ಚಿತ್ರಗಳಿಂದಾಗಿಯೇ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Different love story: ಬರ್ಗರ್ ಕೊಡಿಸಿ 20ರ ಯುವತಿಯನ್ನು ಮದುವೆಯಾದ ಆಸಾಮಿ !!

ಇದೀಗ ಟಾಲಿವುಡ್ ಚಲನಚಿತ್ರ ನಿರ್ಮಾಪಕರು ಕಣ್ಣು ಆಕೆಯ ಮೇಲೆ ಬಿದ್ದಿದೆ. ಆಕೆಯ ಗ್ಲಾಮರ್, ನಟನೆ ಮತ್ತು ಫ್ಯಾಷನ್ ಎಲ್ಲವೂ ನಿರ್ಮಾಪಕರನ್ನು ಆಕೆಯ ಮನೆ ಬಾಗಿಲಿಗೆ ಬಂದು ನಿಲ್ಲುವಂತೆ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಪ್ರಭಾಸ್ ಅವರ ಮುಂದಿನ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಆಕೆಯನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮಾಳವಿಕಾ ಅವರು ಕೇರಳದಲ್ಲಿ ಜನಿಸಿದ್ದರು ಸಹ ಬೆಳೆದಿದ್ದೆಲ್ಲ ಮುಂಬೈನಲ್ಲಿ. ಆಕೆ 2013ರ ಮಲಯಾಳಂ ಚಿತ್ರ ‘ಪಟ್ಟಂ ಪೋಲ್’ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು ಮತ್ತು 2017ರಲ್ಲಿ ‘ಬಿಯಾಂಡ್ ದಿ ಕ್ಲೌಡ್ಸ್’ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2019ರಲ್ಲಿ ಆಕೆ ರಜನಿಕಾಂತ್ ಅಭಿನಯದ ‘ಪೆಟ್ಟಾ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದರು. ಈಗ ಅವರು ಮಾರುತಿ ಅವರ ನಿರ್ದೇಶನದ ತೆಲುಗು ಚಿತ್ರದಲ್ಲಿ ಪ್ರಭಾಸ್ ಅವರೊಂದಿಗೆ ಅಭಿನಯಿಸುತ್ತಿದ್ದಾರೆ.

ಪ್ರಭಾಸ್ ಅಭಿನಯದ ಈ ಚಿತ್ರಕ್ಕೆ ‘ರಾಜಾ ಡಿಲಕ್ಸ್’ ಎಂದು ಹೆಸರಿಡಲಾಗಿದ್ದು, ಅದರಲ್ಲಿ ಆಕೆ ನಾಯಕಿಯಾಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಆಕೆಯ ಪಾತ್ರ ಮತ್ತು ಚಿತ್ರದ ಬಗ್ಗೆ ಇತರ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಾಗುವುದು ಎಂಬುದಾಗಿ ತಿಳಿಸಿದ್ದಾರೆ. ಆಕೆ ಇತ್ತೀಚೆಗೆ ತಮಿಳು ಮಾಧ್ಯಮ ಪೋರ್ಟಲ್ನೊಂದಿಗೆ ಈ ಸುದ್ದಿಯನ್ನು ದೃಢಪಡಿಸಿದ್ದಾರೆ ಮತ್ತು ಚಿತ್ರದ ಚಿತ್ರೀಕರಣವು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ.

You may also like

Leave a Comment