Home » CM Siddaramaiah: ನನಗಿನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗಲು ಇಷ್ಟವಿಲ್ಲ- ಸಿಎಂ ಸಿದ್ದರಾಮಯ್ಯ!!

CM Siddaramaiah: ನನಗಿನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗಲು ಇಷ್ಟವಿಲ್ಲ- ಸಿಎಂ ಸಿದ್ದರಾಮಯ್ಯ!!

9 comments

CM Siddaramaiah: ದೇಶಾದ್ಯಂತ ವಿವಿದ ಹಂತಗಳಲ್ಲಿ ಲೋಕಸಭಾ ಚುನಾವಣೆ(Parliament Election) ನಡೆಯುತ್ತಿದೆ. ರಾಜ್ಯದಲ್ಲಿ ಎರಡು ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು ನಾಯಕರು, ಅಭ್ಯರ್ಥಿಗಳು ರಿಲಾಕ್ಸ್ ಮೂಡ್ ನಲ್ಲಿ ಇದ್ದಾರೆ. ಇದೀಗ ಈ ಬೆನ್ನಲ್ಲೇ ಸಿದ್ದರಾಮಯ್ಯ(CM Siddaramaiah) ಅವರು ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್(Congress) ಪರ ಪ್ರಚಾರಕ್ಕೆ ಹೋಗಲು ನನಗಿನ್ನು ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Anant Ambani: ಆನೆಗಳನ್ನು ರಕ್ಷಿಸಲು 3,500 ಕಿ.ಮೀ ಸಂಚರಿಸಿದ ಅನಂತ್ ಅಂಬಾನಿ ತಂಡ : ನೆಟ್ಟಿಗರಿಂದ ಬಾರಿ ಮೆಚ್ಚುಗೆ

ಹೊರ ರಾಜ್ಯಗಳಿಗೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಹೋಗುವ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ‘ನನ್ನನ್ನು ಸ್ಟಾರ್‌ ಪ್ರಚಾರಕನನ್ನಾಗಿ ಮಾಡಿಯಾಗಿದೆ. ಜತೆಗೆ ಹೈಕಮಾಂಡ್‌ನವರು ಪ್ರಚಾರಕ್ಕೆ ಬರುವಂತೆ ನನ್ನನ್ನು ಕರೆದಿದ್ದಾರೆ. ಆದರೆ ಪ್ರಚಾರಕ್ಕೆ ಹೋಗಲು ವೈಯಕ್ತಿಕವಾಗಿ ನನಗೆ ಇಷ್ಟ ಇಲ್ಲ. ರಾಜ್ಯದಲ್ಲಿಯೇ ಮಾಡಲು ಬೇಕಾದಷ್ಟು ಕೆಲಸವಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bathroom – Washroom: ನೀವು ಔಟಿಂಗ್ ಹೋದಲ್ಲಿ ಬಾತ್‌ ರೂಂ, ವಾಶ್ ರೂಂ, ರೆಸ್ಟ್ ರೂಂ, ಟಾಯ್ಲೆಟ್ ಬೋರ್ಡ್ ನೋಡಿ ಕನ್ಫ್ಯೂಸ್ ಆಗದಿರಿ!

ಅಲ್ಲದೆ ಸದ್ಯ ಸುದ್ದಿಯಾಗುತ್ತಿರುವ ಆಪರೇಷನ್ ಕಮಲ, ಸರ್ಕಾರ ಪತನ ವಿಚಾರವಾಗಿ ಮಾತನಾಡಿದ ಅವರು ನಮ್ಮ ಸರ್ಕಾರ ಸುಭದ್ರವಾಗಿದೆ. ಹೊರಗೂ, ಒಳಗೂ ಭಿನ್ನಮತ ಇಲ್ಲ. ಒಳಜಗಳ ಇದ್ದರೆ ಲೋಕಸಭೆ ಚುನಾವಣೆಯಲ್ಲಿ ಇಷ್ಟೊಂದು ಒಗ್ಗಟ್ಟಿನಿಂದ ಕೆಲಸ ಮಾಡಲು ಆಗುತ್ತಿತ್ತಾ? ಸರ್ಕಾರ ಸುಭದ್ರವಾಗಿದೆ. ಇನ್ನೂ ಏಕನಾಥ್ ಶಿಂಧೆ ಸರ್ಕಾರ ಇರುತ್ತದೆಯೋ? ಇಲ್ಲವೋ ನೋಡಿಕೊಳ್ಳಲಿ ಎಂದು ಹೇಳಿದ್ದಾರೆ.

You may also like

Leave a Comment