Home » ಹೊಸ ಇತಿಹಾಸ ಬರೆದ ಸಿಎಂ ಸಿದ್ದರಾಮಯ್ಯ: ಹೆಚ್ಚು ದಿನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ

ಹೊಸ ಇತಿಹಾಸ ಬರೆದ ಸಿಎಂ ಸಿದ್ದರಾಮಯ್ಯ: ಹೆಚ್ಚು ದಿನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ

0 comments

ಬೆಂಗಳೂರು: ಸಿಎಂ ಆಗಿ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಬ್ರೇಕ್‌ ಮಾಡಿದ್ದಾರೆ. ಮುಖ್ಮಂತ್ರಿಯಾಗಿ ಹೆಚ್ಚು ಅವಧಿ ಸೇವೆ ಸಲ್ಲಿಸಿದ ಕೀರ್ತಿಗೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಭಾಜನರಾಗಿದ್ದಾರೆ. 7 ವರ್ಷ 7 ತಿಂಗಳು 20 ದಿನಗಳ ಕಾಲ ದೇವರಾಜ ಅರಸು ಅವರು ಸಿಎಂ ಆಗಿದ್ದರು.

ಸಿದ್ದರಾಮಯ್ಯ ಅವರು 2013 ರ ಮೇ 13 ರಿಂದ 2018 ರ ಮೇ 17 ರವರೆಗೆ ಸೇವೆ ಮಾಡಿದ್ದರು, ನಂತರ 2023 ರ ಮೇ 20 ರಿಂದ 2 ನೇ ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ 963 ದಿನಗಳು ಪೂರ್ಣಗೊಂಡಿದೆ. ಈ ಮೂಲಕ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದೀರ್ಘಕಾಲ ಸಿಎಂ ಆಗಿ ಸೇವೆ ಮಾಡಿದ ಪಟ್ಟಿದ ಸೇರಿದ್ದಾರೆ.

You may also like