Home » CM Siddaramiah : ಮುಂದಿನ ಮೂರುವರೆ ವರ್ಷ ಕಾಂಗ್ರೆಸ್ ನಿಂದ ಯಾರು ಸಿಎಂ ಆಗ್ತಾರೆ ಗೊತ್ತಾ? ಸಿದ್ದರಾಮಯ್ಯ ಅಚ್ಚರಿ ಹೇಳಿಕೆ

CM Siddaramiah : ಮುಂದಿನ ಮೂರುವರೆ ವರ್ಷ ಕಾಂಗ್ರೆಸ್ ನಿಂದ ಯಾರು ಸಿಎಂ ಆಗ್ತಾರೆ ಗೊತ್ತಾ? ಸಿದ್ದರಾಮಯ್ಯ ಅಚ್ಚರಿ ಹೇಳಿಕೆ

0 comments

CM Siddaramiah : ರಾಜ್ಯದಲ್ಲಿ ಸಿಎಂಬ ಬದಲಾವಣೆ ವಿಚಾರ ಆಗಾಗ ಚರ್ಚೆಗೆ ಬರುತ್ತಿರುತ್ತದೆ. ಕೆಲವು ಸಮಯದ ಹಿಂದೆ ಈ ಪಟ್ಟದ ವಿಚಾರ ಭಾರಿ ಚರ್ಚೆಯಾಗಿ ಇದರ ಮೇಲೆ ಅನೇಕರು ಕಣ್ಣಿಟ್ಟು ನಿರಾಸೆಯಾಗಿದ್ದು ನಾವು ನೋಡಿದ್ದೇವೆ. ಇದೀಗ ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಮೂರುವರೆ ವರ್ಷಗಳ ಕಾಲ ಯಾರು ಸಿಎಂ ಆಗುತ್ತಾರೆ ಎಂಬ ಸುಳಿವನ್ನು ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramiah )ಸಂಡೂರು ಉಪಚುನಾವಣಾ ಪ್ರಚಾರದ ವೇಳೆ ಮುಂದಿನ ಮೂರುವರೆ ವರ್ಷಗಳ ಕಾಲ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವೆ ಎಂಬರ್ಥದ ಹೇಳಿಕೆ ನೀಡಿದ್ದಾರೆ. ಉಪಚುನಾವಣೆಯ ಹೊತ್ತಲ್ಲಿ ಇದು ರಾಜ್ಯದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಅಲ್ಲದೆ ಡಿಕೆಶಿ ಬಣದವರ ಆಕ್ರೋಶಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಹೇಳಿದ್ದೇನು?
ಸಂಡೂರಿನಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ಮೂರುವರೆ ವರ್ಷ ಯಾರು ಅಧಿಕಾರದಲ್ಲಿರುವವರು ಎಂದು ಪ್ರಶ್ನಿಸುತ್ತಾರೆ. ಆಗ ಸಮಾವೇಶದಲ್ಲಿ ನೆರೆದಿದ್ದ ಜನರು, ‘ಕಾಂಗ್ರೆಸ್’ ಎಂದು ಘೋಷಣೆ ಕೂಗಿದ್ದಾರೆ. ಜನರ ಮಾತಿಗೆ ದನಿಗೂಡಿಸಿ ಮಾತನಾಡಿದ ಸಿಎಂ, ‘ಸಿದ್ದರಾಮಯ್ಯ, ಕಾಂಗ್ರೆಸ್’ ಎಂದು ಒತ್ತುಕೊಟ್ಟು ಹೇಳಿದ್ದಾರೆ. ಆ ಮೂಲಕ ಮೂರುವರೆ ವರ್ಷ ನಾನೇ ಸಿಎಂ ಎಂಬ ಸಂದೇಶ ಸಾರಿದ್ದಾರೆ.

You may also like

Leave a Comment