Home » CM Siddaramiah : ಹರಸಾಹಸ ಪಟ್ಟರು ಸಿಎಂ ಸಿದ್ದರಾಮಯ್ಯರ ಹೊಸ ಮನೆಗೆ ಸಿಗದ ಕರೆಂಟ್ ಕನೆಕ್ಷನ್ – ಕಾರಣ ಹೀಗಿದೆ ನೋಡಿ

CM Siddaramiah : ಹರಸಾಹಸ ಪಟ್ಟರು ಸಿಎಂ ಸಿದ್ದರಾಮಯ್ಯರ ಹೊಸ ಮನೆಗೆ ಸಿಗದ ಕರೆಂಟ್ ಕನೆಕ್ಷನ್ – ಕಾರಣ ಹೀಗಿದೆ ನೋಡಿ

0 comments

CM Siddaramiah : ಮೈಸೂರಿನಲ್ಲಿ ಸಿದ್ದರಾಮಯ್ಯ ಅವರು ಮೂರು ಅಂತಸ್ತಿನ ಹೊಸ ಮನೆಯನ್ನು ನಿರ್ಮಿಸಿದ್ದು ಇದೀಗ ಈ ಮನೆಗೆ ವಿದ್ಯುತ್ ಸಂಪರ್ಕವನ್ನು ಪಡೆಯಲು ಅವರಿಗೆ ಸಾಧ್ಯವಾಗಿಲ್ಲಮ್

ಹೌದು, ಹೊಸದಾಗಿ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ನೀಡುವ ಸಂಬಂಧ ಉಂಟಾಗಿರುವ ಕಗ್ಗಂಟಿಗೆ ಪರಿಹಾರ ಸಿಗದೇ ಇರುವ ಕಾರಣ ಸಿದ್ದರಾಮಯ್ಯ ಅವರು ಮೈಸೂರಿನ ಕುವೆಂಪು ನಗರದ 80X120 ಅಡಿ ಅಳತೆಯ ನಿವೇಶನದಲ್ಲಿ ಮೂರು ಅಂತಸ್ತಿನ ಮನೆ ನಿರ್ಮಿಸಿದ್ದಾರೆ. ಆರು ತಿಂಗಳ ಹಿಂದೆಯೇ 94 ಕಿಲೊವಾಟ್‌ ವಿದ್ಯುತ್‌ ಮಂಜೂರಾಗಿದೆ. ಆದರೆ, ನ್ಯಾಯಾಲಯವು ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ಕಡ್ಡಾಯ ಮಾಡಿರುವ ಕಾರಣ ವಿದ್ಯುತ್‌ ಸಂಪರ್ಕ ನೀಡಲು ಸಾಧ್ಯವಾಗಿಲ್ಲ’ ಎಂದು ಮೂಲಗಳು ಖಚಿತಪಡಿಸಿವೆ.

‘ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ, ಈ ವರ್ಷದ ಏಪ್ರಿಲ್‌ನಿಂದಲೇ ರಾಜ್ಯದ ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ವಿದ್ಯುತ್‌ ಸಂಪರ್ಕ ನೀಡಲು ನಕ್ಷೆ ಮಂಜೂರಾತಿ, ಒಸಿಯನ್ನು ಕಡ್ಡಾಯಗೊಳಿಸಲಾಗಿದೆ. ಒ.ಸಿ ಇಲ್ಲದೆ ಇರುವುದರಿಂದ ಸಿದ್ದರಾಮಯ್ಯ ಅವರ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ’ ಎಂದು ಕರ್ನಾಟಕ ವಿದ್ಯುತ್ ಗುತ್ತಿಗೆದಾರರ ಸಂಘದ (ಕೆಎಸ್‌ಎಲ್‌ಇಸಿಎ) ಅಧ್ಯಕ್ಷ ರಮೇಶ್‌ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

You may also like