Home » Bigg Boss Kannada: ಮೊದಲ ದಿನವೇ ಔಟಾಗಿದ್ದ ಕರಾವಳಿ ಬೆಡಗಿ ರಕ್ಷಿತಾ ಶೆಟ್ಟಿ ದೊಡ್ಮನೆಗೆ ವಾಪಸ್

Bigg Boss Kannada: ಮೊದಲ ದಿನವೇ ಔಟಾಗಿದ್ದ ಕರಾವಳಿ ಬೆಡಗಿ ರಕ್ಷಿತಾ ಶೆಟ್ಟಿ ದೊಡ್ಮನೆಗೆ ವಾಪಸ್

0 comments

Bigg Boss Kannada: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-12 ಸೆ.28 ರಂದು ಪ್ರಾರಂಭವಾಗಿತ್ತು. ಒಟ್ಟು 19 ಸ್ಪರ್ಧಿಗಳ ಪೈಕಿ 6 ಸ್ಪರ್ಧಿಗಳು ಒಂಟಿಗಳಾಗಿ, 5 ಸ್ಪರ್ಧಿಗಳು ಜಂಟಿಗಳಾಗಿ ಹಾಗೂ 3 ಸ್ಪರ್ಧಿಗಳು ಅತಂತ್ರರಾಗಿ ಬಿಗ್‌ಬಾಸ್ ಮನೆಯನ್ನು ಪ್ರವೇಶಿಸಿದ್ದರು. ರಕ್ಷಿತಾ ಶೆಟ್ಟಿ, ಮಾಳು ನಿಪನಾಳ, ಸ್ಪಂದನಾ ಅತಂತ್ರ ಸ್ಥಿತಿಯಲ್ಲಿ ಇದ್ದರು. ಇದರಲ್ಲಿ ಒಬ್ಬರನ್ನು ಹೊರಗೆ ಕಳಿಸುವಂತೆ ಬಿಗ್‌ಬಾಸ್‌ ಸೂಚಿಸಿದ್ದರು. ಹೊರಗೆ ಕಳುಹಿಸುವ ನಿರ್ಧಾರವನ್ನು 6 ಒಂಟಿಗಳಿಗೆ ನೀಡಲಾಗಿತ್ತು. ಅದರಂತೆ ರಕ್ಷಿತಾ ಶೆಟ್ಟಿಯನ್ನು ಎಲಿಮಿನೇಟ್ ಮಾಡಿದ್ದರು.

ಹೌದು, ಬಿಗ್‌ಬಾಸ್ ಕನ್ನಡ (Bigg Boss Kannada) ಸೀಸನ್ (Bigg Boss Kannada) 12 ಆರಂಭಗೊಂಡ ಮೊದಲ ದಿನವೇ ಕೆಲವೇ ಗಂಟೆಗಳಲ್ಲಿ ಔಟಾಗಿದ್ದ ಕರಾವಳಿಯ ಯೂಟ್ಯೂಬರ್ ರಕ್ಷಿತಾ ಶೆಟ್ಟಿ (Rakshita Shetty) ರೀ ಎಂಟ್ರಿ ಕೊಟ್ಟಿದ್ದಾರೆ.

ರಕ್ಷಿತಾ ಶೆಟ್ಟಿ ರೀ ಎಂಟ್ರಿ ಕೊಟ್ಟಿರುವ ಪ್ರೋಮೋ ಸದ್ಯ ರಿಲೀಸ್‌ ಆಗಿದ್ದು, ವಿಡಿಯೋದಲ್ಲಿ ಕಿಚ್ಚ ಸುದೀಪ್ (Kichcha Sudeep) ರಕ್ಷಿತಾ ಅವರನ್ನು ಮತ್ತೆ ಬಿಗ್‌ಬಾಸ್ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಮತ್ತೆ ಹೋಗಿ ಏನು ಮಾಡ್ತೀರಾ ಎಂದು ಕೇಳಿದ ಸುದೀಪ್‌ಗೆ ರಕ್ಷಿತಾ, ಎಲ್ಲರ ಹತ್ತಿರ ಪ್ರಾಪರ್ ರೀಸನ್ ಕೇಳ್ತಿನಿ. ಅವತ್ತು ಯಾರು ನನ್ನ ಜೊತೆ ನಿಲ್ಲಲಿಲ್ಲ. ನಾನು ಹೇಗೆ ಅಂತ ಗೊತ್ತಿಲ್ಲದೇ ಕವರ್ ನೋಡಿ ನನ್ನನ್ನು ಜಡ್ಜ್ ಮಾಡಿದರು. ನನಗೆ ಆ ಯೋಗ್ಯತೆ ಇದೆ ಎಂದು ಹೇಳಿ, ಕಿಚ್ಚಿನೊಂದಿಗೆ ಬಿಗ್‌ಬಾಸ್ ಮನೆಗೆ ಮರಳಿದ್ದಾರೆ.

ಇದನ್ನೂ ಓದಿ:Rashmika-Vijay: ನಿಶ್ಚಿತಾರ್ಥ ಮುಗಿಸಿಕೊಂಡ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ : ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು?

You may also like