Home » Chaitra Kundapura: ಕರಾವಳಿಯ ಫೈರ್‌ಬ್ರ್ಯಾಂಡ್‌ ಚೈತ್ರಾ ಕುಂದಾಪುರ ಮದುವೆ ಮೇ 09 ಕ್ಕೆ!

Chaitra Kundapura: ಕರಾವಳಿಯ ಫೈರ್‌ಬ್ರ್ಯಾಂಡ್‌ ಚೈತ್ರಾ ಕುಂದಾಪುರ ಮದುವೆ ಮೇ 09 ಕ್ಕೆ!

0 comments

Chaitra Kundapura: ತನ್ನ ಮಾತಿನ ಮೂಲಕವೇ ಖ್ಯಾತಿ ಪಡೆದ ಕುಂದಾಪುರದ ಫೈರ್‌ ಬ್ರ್ಯಾಂಡ್‌ ಎಂದೇ ಹೆಸರು ಪಡೆದ ಚೈತ್ರಾ ಕುಂದಾಪುರ ಬಿಗ್‌ಬಾಸ್‌ ಕನ್ನಡ ಸೀಸನ್‌-11 ರಲ್ಲಿ ಮಿಂಚಿದ್ದು, ಇದೀಗ ತಮ್ಮ ಮದುವೆ ಸುದ್ದಿ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.

ಬಿಗ್‌ಬಾಸ್‌ ನಲ್ಲಿದ್ದಾಗಲೇ ಮದುವೆ ನಿಶ್ಚಯ ಮಾಡಿಕೊಂಡು ಬಂದಿದ್ದೀನಿ, ನನ್ನ ಕ್ಯಾರೆಕ್ಟರ್‌ ವಿಷಯಕ್ಕೆ ಬಂದರೆ ಎಂದು ಬಿಗ್‌ಬಾಸ್‌ನಲ್ಲೇ ಅವಾಜ್‌ ಹಾಕಿದ ಚೈತ್ರಾ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

ಚೈತ್ರಾ ಅವರದ್ದು ಲವ್‌ ಕಮ್‌ ಅರೆಂಜ್‌ ಮ್ಯಾರೇಜ್‌ ಆಗಿದೆ. ಚೈತ್ರಾ ಅವರು ಮದುವೆ ಆಗುವ ಹುಡುಗ ಯಾರು ಎನ್ನುವ ವಿಷಯ ಇನ್ನೂ ರಿವೀಲ್‌ ಆಗಿಲ್ಲ.

ಮೇ.9 ಶುಕ್ರವಾರದಂದು ಚೈತ್ರಾ ಕುಂದಾಪುರ ಅವರ ವಿವಾಹವು ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ.

You may also like