Viral Video: ಪ್ರೀತಿಗೆ ಕಣ್ಣಿಲ್ಲ ಎಂಬುದು ಸಾಮಾನ್ಯವಾದ ಮಾತು. ಆದರೆ ಇತ್ತೀಚೆಗೆ ಪ್ರೇಮಿಗಳಿಗೂ ಕಣ್ಣಿಲ್ಲ ಎಂಬುದು ಸಾಬೀತಾಗುತ್ತಿದೆ. ಹೌದು, ಇದೀಗ ಪ್ರೇಮಿಗಳಿಬ್ಬರ ವಿಡಿಯೋ ಒಂದು ವೈರಲ್ ಆಗಿದ್ದು ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. ಒಂದು ಜೋಡಿ ಹಕ್ಕಿ ತಮ್ಮ ಅಕ್ಕಪಕ್ಕದಲ್ಲಿ ಜನರಿದ್ದಾರೆ ಅನ್ನೋ ಪರಿವೆ ಇಲ್ಲದೆ ಬಸ್ಸಿನಲ್ಲಿಯೇ ಒಬ್ಬರನ್ನೊಬ್ಬರು ತಬ್ಬಿಕೊಂಡು ರೊಮ್ಯಾನ್ಸ್ ಮಾಡಿರುವ ವಿಡಿಯೋ ಒಂದು ವೈರಲ್ ಆಗಿದೆ.
ಈ ರೀತಿಯಾಗಿ ಪ್ರೇಮಿಗಳು ಹಗ್ಗಿಂಗ್, ಕಿಸ್ಸಿಂಗ್ ಮಾಡೋ ದೃಶ್ಯವನ್ನು ಯಾರೋ ಸೆರೆ ಹಿಡಿದು ಆ ವಿಡಿಯೋವನ್ನು yours.jaans ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಕೇವಲ ನಾಲ್ಕೇ ದಿನಗಳಲ್ಲಿ 18 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
ನೋಡುಗರಲ್ಲಿ ಕೆಲವರು ವಿಡಿಯೋ ಮಾಡಿದ್ದನ್ನೇ ತಪ್ಪೆಂದು ಕಾಮೆಂಟ್ ಮಾಡಿದ್ದರೆ, ಇನ್ನು ಕೆಲವರು ಆ ಪ್ರೇಮಿಗಳಿಗೆ ಛೀಮಾರಿ ಹಾಕಿದ್ದಾರೆ. ಪ್ರೀತಿಯಲ್ಲಿ ಬಿದ್ದವರಿಗೆ ಜಗದ ಅರಿವೇ ಇರುವುದಿಲ್ಲ ಎಂಬ ಮಾತಿನಂತೆ, ಲೋಕದ ಪರಿವೇ ಇಲ್ಲದೆ ಈ ರೀತಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಿತಿ ಮೀರಿ ವರ್ತಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ.
