Home » Chitradurga: ಕಾಲೇಜು ವಿದ್ಯಾರ್ಥಿನಿಯ ಬರ್ಬರ ಹತ್ಯೆ, ರೇಪ್‌ ಮಾಡಿ ಬೆಂಕಿ ಹಚ್ಚಿ ಸುಟ್ಟು ಬಿಟ್ಟ ದುಷ್ಕರ್ಮಿಗಳು

Chitradurga: ಕಾಲೇಜು ವಿದ್ಯಾರ್ಥಿನಿಯ ಬರ್ಬರ ಹತ್ಯೆ, ರೇಪ್‌ ಮಾಡಿ ಬೆಂಕಿ ಹಚ್ಚಿ ಸುಟ್ಟು ಬಿಟ್ಟ ದುಷ್ಕರ್ಮಿಗಳು

by ಹೊಸಕನ್ನಡ
0 comments

Chitradurga: ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 48 ರ ಬಳಿ ಅರೆಬೆಂದ ಸ್ಥಿತಿಯಲ್ಲಿ ನಗ್ನವಾಗಿ ಕಂಡು ಬಂದ ಸ್ಥಿತಿಯಲ್ಲಿ 19 ವರ್ಷದ ಕಾಲೇಜು ಯುವತಿಯ ಶವ ಪತ್ತೆಯಾಗಿದೆ.

ಆಗಸ್ಟ್‌ 19 ರಂದು ಗೋನೂರು ಗ್ರಾಮದ ಬಳಿ ವರ್ಷಿತಾ ಸುಟ್ಟ ದೇಹ ಪತ್ತೆಯಾಗಿದೆ. ಅತ್ಯಾಚಾರ ಮಾಡಿ, ಕೊಲೆ ಮಾಡಿ ನಂತರ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಈ ಪ್ರಕರಣ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ವರ್ಷಿತಾ ಜೊತೆ ಸಂಪರ್ಕದಲ್ಲಿದ್ದ ಚೇತನ್‌ ಎನ್ನುವ ಯುವಕನ ವಿಚಾರಣೆ ನಡೆಯುತ್ತಿದೆ. ಈತ ಕ್ಯಾನ್ಸರ್‌ನ ಮೂರನೇ ಹಂತದಲ್ಲಿದ್ದಾನೆ, ಚಿಕಿತ್ಸೆ ಪಡೆಯುತ್ತಿದ್ದನೆ ಎನ್ನುವ ಮಾಹಿತಿ ಲಭ್ಯವಾಗಿದೆ.

Mysore Dasara: ಈ ಬಾರಿ ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ? ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರಾಸಕ್ತಿ

You may also like