Home » Commited Suicide: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

Commited Suicide: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

by Praveen Chennavara
0 comments
Commited suicide

Commited suicide: ಕಾಸರಗೋಡು: ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ (Commited suicide) ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಕಾಸರಗೋಡು ಜಿಲ್ಲೆಯ ಆದೂರು ಠಾಣೆ ವ್ಯಾಪ್ತಿಯ ಕಿನ್ನಿಂಗಾರ್ ಎಂಬಲ್ಲಿ ಈ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಬೆಳ್ಳೂರು ಕಿನ್ನಿಂಗಾರ್ ಬೇಳೆರಿಯ ನಿವಾಸಿ ಕೊರಗಪ್ಪ ಎಂಬವರ ಪುತ್ರಿ ಪ್ರಣಮಿಕಾ (16) ಎಂದು ಗುರುತಿಸಲಾಗಿದ್ದು, ಬೆಳ್ಳೂರು ವಾಣಿನಗರ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿನಿ.

ರಾತ್ರಿ ಸ್ನಾನಕ್ಕೆಂದು ತೆರಳಿದ್ದ ಈಕೆ ಹೊರ ಬಾರದ ಹಿನ್ನೆಲೆಯಲ್ಲಿ ಮನೆಯವರು ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಪ್ರಣಮಿಕಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಮನೆಯವರು ಆಕೆಯನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.

ಈ ಕುರಿತು ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

 

ಇದನ್ನು ಓದಿ: Tips to lose weight: ಜಿಮ್ ಗೆ ಹೋಗದೆ ನೀವು ಒಂದೇ ತಿಂಗಳಲ್ಲಿ ತೂಕವನ್ನು ಇಳಿಸಬಹುದು! ಇಲ್ಲಿದೆ ಟಿಪ್ಸ್

You may also like

Leave a Comment