Home » Kerala: ಕಾಲೇಜು ಪ್ರವಾಸದ ಬಸ್‌ ಪಲ್ಟಿ; ಸ್ಥಳದಲ್ಲೇ 3 ವಿದ್ಯಾರ್ಥಿಗಳು ಸಾವು

Kerala: ಕಾಲೇಜು ಪ್ರವಾಸದ ಬಸ್‌ ಪಲ್ಟಿ; ಸ್ಥಳದಲ್ಲೇ 3 ವಿದ್ಯಾರ್ಥಿಗಳು ಸಾವು

0 comments

Kerala: ಕಾಲೇಜು ಪ್ರವಾಸದ ಬಸ್‌ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು ಸಾವಿಗೀಡಾಗಿರುವ ಘಟನೆಯೊಂದು ಕೇರಳದ ಮುನ್ನಾರ್‌ನಲ್ಲಿ ನಡೆದಿದೆ.

ತಮಿಳುನಾಡಿನ ನಾಗರ್‌ಕೊಯಿಲ್‌ನ ಸ್ಕಾಟ್‌ ಕ್ರಿಶ್ಚಿಯನ್‌ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಪ್ರವಾಸಕ್ಕೆಂದು ಹೋಗಿದ್ದು, ಎಕೋ ಪಾಯಿಂಟ್‌ ಬಳಿ ಬಸ್‌ ಪಲ್ಟಿಯಾಗಿ ಬಿದ್ದಿದೆ. ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ತಮಿಳುನಾಡು ಮೂಲದವರಾದ ವೆನಿಕಾ, ಅತಿಕಾ.ಆರ್., ಸುಧನ್‌ ಮೃತ ವಿದ್ಯಾರ್ಥಿಗಳು.

ಅಪಘಾತದಲ್ಲಿ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 19 ಜನ ಗಾಯಗೊಂಡಿದ್ದು, ಇವರಲ್ಲಿ ನಾಲ್ಕು ಮಂದಿಯ ಸ್ಥಿತಿಯ ಗಂಭೀರವಾಗಿದೆ. ಕುಂಡಲ ಅಣೆಕಟ್ಟಿನ ಕಡೆಗೆ ಬಸ್‌ ತೆರಳುತ್ತಿದ್ದಾಗ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಬಸ್‌ ಪಲ್ಟಿಯಾಗಿತ್ತು.

You may also like