Home » Accident: ಆಟೋ ರಿಕ್ಷಾ – ಪ್ರವಾಸಿ ಬಸ್ ನಡುವೆ ಡಿಕ್ಕಿ: ಆಟೋ ಚಾಲಕನಿಗೆ ಗಾಯ

Accident: ಆಟೋ ರಿಕ್ಷಾ – ಪ್ರವಾಸಿ ಬಸ್ ನಡುವೆ ಡಿಕ್ಕಿ: ಆಟೋ ಚಾಲಕನಿಗೆ ಗಾಯ

0 comments

Accident: ಪ್ರವಾಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ (Accident) ಸಂಭವಿಸಿ ಆಟೋ ಚಾಲಕ ಗಾಯಗೊಂಡಿರುವ ಘಟನೆ ಇಂದು ಸಂಜೆ ಏಳನೆ ಹೊಸ ಕೋಟೆ ಸರ್ಕಾರಿ ಶಾಲೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಕೇರಳ ರಾಜ್ಯದಲ್ಲಿ ನೋಂದಣಿ ಆಗಿರುವ ವಿರಾಜಪೇಟೆಯ ಖಾಸಗಿ ಬಸ್ ಕುಶಾಲನಗರ ಕಡೆಯಿಂದ ಬರುತ್ತಿದ್ದಾಗ ಸುಂಟಿಕೊಪ್ಪದಿಂದ ಬಂದ ಆಟೋ ರಿಕ್ಷಾ ಪರಸ್ಪರ ಎದುರಾಗಿ ಡಿಕ್ಕಿ ಸಂಭವಿಸಿದೆ.

ಈ ಹಿಂದೆ ಸುಂಟಿಕೊಪ್ಪದಲ್ಲಿ ಆಟೋ ರಿಕ್ಷಾ ಚಲಾಯಿಸುತ್ತಿದ್ದ ಪ್ರಸ್ತುತ ಕೊಪ್ಪದಲ್ಲಿ ನೆಲೆಸಿರುವ ಆಟೋ ಚಾಲಕ ಜೀವನ್ ಎಂಬಾತ ಗಾಯಗೊಂಡು ಜಿಲ್ಲಾಸ್ಪತ್ರೆ ಮಡಿಕೇರಿಯಲ್ಲಿ ದಾಖಲಾಗಿದ್ದಾನೆ. ಈ ಅವಘಡದಿಂದಾಗಿ ಆಟೋ ರಿಕ್ಷಾ ರಸ್ತೆಯಲ್ಲಿ ಮಗುಚಿಕೊಂಡು ನಜ್ಜು ಗುಜ್ಜಾಗಿದೆ.

You may also like