Home » Accident : ಕ್ರೂಸರ್ ಬೈಕ್ ಡಿಕ್ಕಿ | ತಂದೆ ಮಗಳ ದಾರುಣ ಸಾವು, ತಾಯಿ ಗಂಭೀರ

Accident : ಕ್ರೂಸರ್ ಬೈಕ್ ಡಿಕ್ಕಿ | ತಂದೆ ಮಗಳ ದಾರುಣ ಸಾವು, ತಾಯಿ ಗಂಭೀರ

0 comments

ಕ್ರೂಸರ್ ವಾಹನ ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ತಂದೆ, ಮಗಳು ಸಾವನ್ನಪ್ಪಿರುವ ದಾರುಣ ಘಟನೆಯೊಂದು ನಡೆದಿದೆ. ಈ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ಸಾತಿಹಾಳ ರಸ್ತೆಯಲ್ಲಿ ನಡೆದಿದೆ.

ರಮೇಶ್ ನಾಟಿಕಾರ (35), ಪುತ್ರಿ ಖುಷಿ (8) ಮೃತ ದುರ್ದೈವಿಗಳು. ತಾಯಿ ಶ್ರೀದೇವಿಗೆ ಗಂಭೀರ ಗಾಯವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರು ಮತ್ತು ಗಾಯಳು ಬಸವನಬಾಗೇವಾಡಿ ತಾಲೂಕಿನ ಬೂದಿಹಾಳ ಗ್ರಾಮದ ನಿವಾಸಿಗಳಾಗಿದ್ದಾರೆ. ಅಪಘಾತ ನಡೆಸಿದವ ಕ್ರೂಸರ್ ಸಮೇತ ಚಾಲಕ ಪರಾರಿಯಾಗಿದ್ದಾನೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment