Home » Comed-K Exam: ನಾಳೆಯಿಂದ ಕಾಮೆಡ್-ಕೆ ಪರೀಕ್ಷೆ!

Comed-K Exam: ನಾಳೆಯಿಂದ ಕಾಮೆಡ್-ಕೆ ಪರೀಕ್ಷೆ!

0 comments
CET Exam 2024

Comed-K Exam: ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಸೀಟುಗಳ ಭರ್ತಿಗೆ ನಡೆಸುವ ಕಾಮೆಡ್-ಕೆ ಯುಜಿಇಟಿ ಮತ್ತು ಯೂನಿಗೇಜ್ ಸಂಯೋಜಿತ ಪರೀಕ್ಷೆಗಳು ಮೇ 10ರಂದು (ನಾಳೆ) ದೇಶಾದ್ಯಂತ 248 ಕೇಂದ್ರಗಳಲ್ಲಿ ನಡೆಯಲಿದೆ. ಈ ಬಾರಿ ಒಟ್ಟು 1.31, 937 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ.

ಪರೀಕ್ಷೆಗಳು ಬೆಳಗ್ಗೆ 8.30 ರಿಂದ 11.30ರವರೆಗೆ, ಮ.1ರಿಂದ 4 ಗಂಟೆ ಹಾಗೂ 5.30ರಿಂದ ರಾತ್ರಿ 8.39 ರವರೆಗೆ ಒಟ್ಟು ಮೂರು ಪಾಳಿಯಲ್ಲಿ ನಡೆಯಲಿದೆ. ಇದು ಆನ್ ಲೈನ್ ಪರೀಕ್ಷೆ ಆದರೂ ವಿದ್ಯಾರ್ಥಿಗಳು ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿರುವ ಕಂಪ್ಯೂಟರ್‌ಮೂಲಕ ಪರೀಕ್ಷೆ ಬರೆಯಲಿದ್ದಾರೆ.

ರಾಜ್ಯದ 150ಕ್ಕೂ ಹೆಚ್ಚು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ದೇಶದ 50ಕ್ಕೂ ಕ್ಕೂ ಹೆಚ್ಚು ಖಾಸಗಿ ಹಾಗೂ ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿನ ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ಪ್ರತೀ ವರ್ಷದಂತೆ ಈ ವರ್ಷವೂ ಕಾಮೆಡ್-ಕೆಈ ಪ್ರವೇಶ ಪರೀಕ್ಷೆನಡೆಸಲಿದೆ. ಆನ್‌ಲೈನ್‌ ಪರೀಕ್ಷೆ ಇದಾಗಿದ್ದು, ಕರ್ನಾಟಕವೂ ಸೇರಿ ದೇಶದ 28 ರಾಜ್ಯಗಳ 179 ನಗರಗಳ ಒಟ್ಟು 248 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಎಲ್ಲೆಡೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾಮೆಡ್-ಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

You may also like