Special task force: ಕರಾವಳಿ ಭಾಗದಲ್ಲಿ ಕೋಮು ದ್ವೇಷದ ಕೊಲೆ ಮತ್ತು ಗಲಭೆ ಪ್ರಕರಣಗಳ ವಿಚಾರ ಹಿನ್ನೆಲೆ ಗೃಹ ಇಲಾಖೆಯಿಂದ ವಿಶೇಷ ಕಾರ್ಯಪಡೆ ರಚನೆ ಮಾಡುವುದಾಗಿ ಕರ್ನಾಟಕ ರಾಜ್ಯ ಸರ್ಕಾರ ಕಾರ್ಯಪಡೆ ಕುರಿತು ನಡವಳಿ ಹೊರಡಿಸಿದೆ.
ನೈತಿಕ ಪೊಲಿಸಗಿರಿ, ದ್ವೇಷ ಭಾಷಣ, ಕೋಮು ಸಂಬಂಧಿತ ಗಲಭೆ ನಿರ್ಬಂಧಕ್ಕೆ ಈ ಪ್ಲಾನ್ ಮಾಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆಯ ಮೂರು ತುಕಡಿ ಆರಂಭಕ್ಕೆ ಸರ್ಕಾರ ನಿರ್ಧರಿಸಿದೆ.
ಡಿಜಿಪಿ ನೇತೃತ್ವದಲ್ಲಿಯೇ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದ್ದು, ದ್ವೇಷ ಭಾಷಣ, ಕೋಮು ಹಿಂಸಾಚಾರ, ಮೂಲಭೂತಿಕರಣ ಗುರುತಿಸಿ ನಿಯಂತ್ರಣ ಜವಾಬ್ದಾರಿಯನ್ನು ಕಾರ್ಯಪಡೆಗೆ ನೀಡಲಾಗಿದೆ. ನೈತಿಕ ಪೊಲೀಸ್ ಗಿರಿಗೂ ವಿಶೇಷ ಕಾರ್ಯಪಡೆ ಕಡಿವಾಣ ಹಾಕಲಿದೆ. 248 ಸಿಬ್ಬಂದಿ ಗಳನ್ನು ಹೊಂದಿರುವ ಈ ವಿಶೇಷ ಕಾರ್ಯಪಡೆಗೆ ಕರಾವಳಿಯ ಮೂರು ಜಿಲ್ಲೆಗಳ ಜವಾಬ್ದಾರಿಯನ್ನು ನೀಡಲಾಗಿದೆ.
ಇದರೊಂದಿಗೆ ನಕ್ಸಲ್ ಮುಕ್ತ ರಾಜ್ಯ ಆಗಿದ್ದರೂ ಸುರಕ್ಷತಾ ದೃಷ್ಟಿಯಿಂದ ಆಂಟಿ ನಕ್ಸಲ್ ಫೋರ್ಸ್ ವಿಸರ್ಜಿಸದೇ, ಮುಂದಿನ ಮೂರು ವರ್ಷ ವಿಸ್ತರಣೆಯನ್ನು ಸರ್ಕಾರ ಮಾಡಿದೆ.
