D K Shivkumar : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿನ ಅವ್ಯವಸ್ಥೆಗಳನ್ನು ಮುಂದಿಟ್ಟುಕೊಂಡು ಅನೇಕ ದೊಡ್ಡ ದೊಡ್ಡ ಕಂಪನಿಗಳು ಬೆಂಗಳೂರನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದೆ. ಇದನ್ನೆಲ್ಲ ಡಿಸಿಎಂ ಡಿಕೆ ಶಿವಕುಮಾರ್ ಅವರು ಜೋರಾಗಿ ಕೊಟ್ಟರು ಹಾಕಿದ್ದು, ಕಂಪನಿಗಳು ಬೆದರಿ ಹೋಗಿವೆ.
ಹೌದು, ಹದಗೆಟ್ಟಿರುವ ರಸ್ತೆಗಳ ಪರಿಸ್ಥಿತಿ ಮತ್ತು ದೀರ್ಘ ಪ್ರಯಾಣದ ಸಮಯವನ್ನು ಉಲ್ಲೇಖಿಸಿ, ನಗರದ ಹೊರ ವರ್ತುಲ ರಸ್ತೆ (ORR) ಪ್ರದೇಶದಿಂದ ತನ್ನ ಕಚೇರಿಯನ್ನು ಸ್ಥಳಾಂತರಿಸಲು ನಿರ್ಧರಿಸಿರುವುದಾಗಿ ಬೆಂಗಳೂರು ಮೂಲದ ಲಾಜಿಸ್ಟಿಕ್ಸ್ ಸ್ಟಾರ್ಟ್ಅಪ್ ಬ್ಲ್ಯಾಕ್‌ಬಕ್ ನ ಸಿಇಒ ರಾಜೇಶ್ ಯಬಾಜಿ ಹೇಳಿದ್ದರು.
ಇದನ್ನೂ ಓದಿ:FD: ಹಿರಿಯ ನಾಗರೀಕರೇ ಗಮನಿಸಿ – ನಿಮ್ಮ FD ಮೇಲೆ ಬೆಸ್ಟ್ ಬಡ್ಡಿ ನೀಡುವ ಬ್ಯಾಂಕುಗಳಿವು !!
ಈ ಬೆನ್ನಲ್ಲೇ ಉದ್ಯಮಿಗಳು ರಾಜ್ಯ ಬಿಟ್ಟು ಹೋಗುವುದಾದರೇ ಅವರನ್ನು ನಾವು ತಡೆಯಲ್ಲ. ಆದರೆ ಈ ಮೂಲಕ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಖಡಕ್ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಆನ್‌ಲೈನ್ ಟ್ರಕ್ಕಿಂಗ್ ಪ್ಲಾಟ್‌ಫಾರ್ಮ್ BlackBuck ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ (Rajesh Yabaji) ಥಂಡಾ ಹೊಡೆದಿದ್ದು ಬೆಂಗಳೂರು ನಮ್ಮ ತವರು, ನಾವು ಬೆಂಗಳೂರಿನಲ್ಲೇ ಬೇರೆ ಏರಿಯಾಗೆ ಸ್ಥಳಾಂತರವಾಗುತ್ತಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ.
