Home » Dharmasthala Case: ಠಾಣೆಗೆ ಮಧ್ಯಾಹ್ನದ ಬಳಿಕ ಬಂದ ದೂರುದಾರ – ಕಾದು ಕಾದು ಸುಸ್ತಾದ ಪೊಲೀಸ್ !!

Dharmasthala Case: ಠಾಣೆಗೆ ಮಧ್ಯಾಹ್ನದ ಬಳಿಕ ಬಂದ ದೂರುದಾರ – ಕಾದು ಕಾದು ಸುಸ್ತಾದ ಪೊಲೀಸ್ !!

0 comments

Dharmasthala : ಧರ್ಮಸ್ಥಳ ನೂರಾರು ಶವಗಳನ್ನು (Dharmasthala Case) ಹೂತಿಟ್ಟ ಪ್ರಕರಣ ಅಂತಿಮ ಘಟ್ಟ ತಲುಪಿದೆ. ಈಗಾಗಲೇ ಒಂಬತ್ತನೇ ದಿನದ ಕಾರ್ಯಾಚರಣೆ ಆರಂಭವಾಗಿದ್ದು, ತನಿಖೆಗೆ ಜಿಪಿಆರ್ ತಂತ್ರಜ್ಞಾನ ಬಳಕೆ ಮಾಡುವಂತೆ ಮನವಿ ಕೂಡ ಮಾಡಲಾಗಿದೆ. ಆದರೆ ಇಂದಿನ ಕಾರ್ಯಾಚರಣೆ ದೂರುದಾರ ಜಯಂತ್ ತಡವಾಗಿ ಬಂದದ್ದು ಪೊಲೀಸರಿಗೆ ತಲೆಬಿಸಿಯನ್ನು ಉಂಟು ಮಾಡಿದೆ.

ಹೌದು, ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನಾಮಿಕ ವ್ಯಕ್ತಿ ತಿಳಿಸಿದಂತೆ ಬಂಗ್ಲೆಗುಡ್ಡ ದ 12 ಜಾಗಗಳಲ್ಲಿ ಪೂರ್ಣ ಶೋಧ ಕಾರ್ಯ ನಡೆಸಿದ್ದು, ಇದೀಗ ಇಂದು 11(A) ರಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. ಆದರೆ ಪ್ರಕರಣದ ಇನ್ನೋರ್ವ ದೂರುದಾರ ಜಯಂತ್‌ ಅವರು ಮಧ್ಯಾಹ್ನ 12 ಗಂಟೆ ಕಳೆದರೂ ಎಸ್‌ಐಟಿ ಕಚೇರಿಗೆ ಹಾಜರಾಗದೇ ಇರುವುದು ಪೊಲೀಸರಿಗೆ ತಲೆಬಿಸಿ ತಂದಿತ್ತು. ಈ ಹಿಂದೆಯೆಲ್ಲಾ ಬೆಳಗ್ಗೆ 11 ಗಂಟೆಯ ಒಳಗೆ ಕಚೇರಿಗೆ ಬರುತ್ತಿದ್ದ ಇವರು, ಇಂದು 12 ಗಂಟೆಯಾದರೂ ಆಗಮಿಸಲಿಲ್ಲ. ಆದರೂ ಕೊನೆಗೆ ದೂರುದಾರ ಮಧ್ಯಾಹ್ನ 1:05 ಕ್ಕೆ ತಡವಾಗಿ ಆಗಮಿಸಿದ್ದು, ಕಾರ್ಯಾಚರಣೆಗೆ ವಿಳಂಬ ಆಗಿದೆ. ಆದರೆ  ಯಾಕೆ ತಡವಾಗಿ ಬಂದ ಎಂಬುದಕ್ಕೆ ಯಾವುದೇ ಉತ್ತರಗಳು ದೊರೆತಿಲ್ಲ.

ಇನ್ನು ವರದಿಯ ಪ್ರಕಾರ, ಪಾಯಿಂಟ್ ಸಂಖ್ಯೆ 13ರ ಉತ್ಖನನಕ್ಕೆ ಜಿಪಿಆರ್ ತಂತ್ರಜ್ಞಾನ ಬಳಕೆ ಮಾಡುವಂತೆ ಮನವಿ ಕೂಡ ಮಾಡಲಾಗಿತ್ತು, ಈ ಹಿನ್ನಲೆ ಈ ತಂತ್ರಜ್ಞಾನ ಮೂಲಕ ಮುಂದಿನ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

Su From So: ‘ಸು ಫ್ರಂ ಸೋ’ ಸಿನಿಮಾದ ಬಜೆಟ್ ಇಷ್ಟೊಂದು ಕಮ್ಮಿಯಾ? ಕೊನೆಗೂ ಗುಟ್ಟು ಬಿಟ್ಟುಕೊಟ್ಟ ರಾಜ್ ಬಿ ಶೆಟ್ಟಿ

You may also like