Madhurai: ಆಭರಣ ಕಳವು ಸಂಬಂಧ ಮಹಿಳೆಯೊಬ್ಬರು ನೀಡಿದ ದೂರಿನ ಅನುಸಾರದ ಪೊಲೀಸ್ ತನಿಖೆಯ ವೇಳೆ ನಡೆಸಿದ ಹಲ್ಲೆಯಿಂದಾಗಿ ಮದಾಪುರಂ ದೇಗುಲದ ಭದ್ರತಾ ಸಿಬ್ಬಂದಿ ಅಜಿತ್ ಕುಮಾರ್ ಸಾವಿಗೀಡಾಗಿದ್ದರು. ಮಹಿಳೆ ಅಜಿತ್ ಸಾವಿಗೆ ಆತನ ತಾಯಿಯ ಕ್ಷಮೆಯಾಚಿಸಿದ್ದಾರೆ.
ತಿರುಪ್ಪುವಣಂನ ಭದ್ರಕಾಳಿಯಮ್ಮನ್ ದೇವಸ್ಥಾನದಲ್ಲಿ ಅಜಿತ್ ಕುಮಾರ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಜೂ.27 ರಂದು ಸಂಜೆ ತನ್ನ ಕಾರಿನಿಂದ 10 ಪವನ್ ಆಭರಣವನ್ನು ಕಳ್ಳತನ ಮಾಡಿದ್ದಾನೆ ಎಂದು ಜೆಪಿ ನಿಖಿತಾ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಪೊಲೀಸರು ಅಜಿತ್‌ನನ್ನು ಕರೆದುಕೊಂಡು ಹೋಗಿದ್ದು, ಮರುದಿನ ರಾತ್ರಿ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.
ಕಳ್ಳತನದ ದೂರು ನೀಡಿದ್ದ ಜೆ.ಪಿ.ನಿಖಿತಾ, ಅಜಿತ್ ತಾಯಿಗೆ ಕ್ಷಮೆಯಾಚಿಸಿದಂತೆ ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಘಟನೆ ನಡೆದಾಗ, ಸಕ್ತೇಶ್ವರನ್ (ಪೊಲೀಸರು ಅಜಿತ್ ಕುಮಾರ್ ಅವರನ್ನು ಹೊಡೆಯುವುದನ್ನು ಚಿತ್ರೀಕರಿಸಿದವರು) ನನ್ನೊಂದಿಗಿದ್ದರು. ಆ ದಿನ, ನಾವು ತಿರುಪ್ಪುವನಂ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಅವರನ್ನು ಭೇಟಿ ಮಾಡಲು ಕಾಯುತ್ತಿದ್ದೆವು. ಪೊಲೀಸರು ಬಂದಾಗ ಆಭರಣಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಿ ಮನೆಗೆ ಮರಳಿದೆವು. ಘಟನೆಯ ಬಗ್ಗೆ ನನಗೆ ಮರುದಿನವೇ ತಿಳಿಯಿತು. ಘಟನೆ ಬಗ್ಗೆ ನಾವು ಮೌನವಹಿಸಿದ್ದೇವೆ ಎಂದರೆ, ಅದು ತಪ್ಪಿನಿಂದ ಅಲ್ಲ. ನಾನು ದೇವರ ಪರೀಕ್ಷೆಯಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Women: ಸಬ್ ಲೆಫ್ಟಿನೆಂಟ್ ಆಸ್ತಾ ಪೂನಿಯಾ ನೌಕಾಪಡೆಯ ಮೊದಲ ಮಹಿಳಾ ಫೈಟರ್ ಪೈಲಟ್!
