Home » ವೀಕೆಂಡ್‌ ಎಪಿಸೋಡ್‌ನಲ್ಲಿ ʼರಣಹದ್ದುʼ ಮಾತು, ನಟ ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

ವೀಕೆಂಡ್‌ ಎಪಿಸೋಡ್‌ನಲ್ಲಿ ʼರಣಹದ್ದುʼ ಮಾತು, ನಟ ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

0 comments
Kichcha Sudeep

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ರ ಶೋ ನಿರೂಪಕ, ನಟ ಕಿಚ್ಚ ಸುದೀಪ್‌ ಅವರು ವೀಕೆಂಡ್‌ನಲ್ಲಿ ರಣಹದ್ದುಗಳ ಕುರಿತು ಮಾತನಾಡಿದ್ದು, ಅದರಲ್ಲಿ ಹೊಂಚು ಹಾಕಿ, ಸಂಚು ಹೂಡಿ ಲಬಕ್‌ ಅಂತ ರಣಹದ್ದುಗಳು ಬೇಟೆ ಆಡುತ್ತದೆ ಎಂದು ಹೇಳಿದರು. ಸುದೀಪ್‌ ಅವರು ಜ್ಞಾನ ಇಲ್ಲದೆ ಮಾತನಾಡಿದ್ದಾರೆ ಎಂದು ಡಿಎಫ್‌ಒ ರಾಮಕೃಷ್ಣ ಎನ್ನುವವರಿಗೆ ರಣಹದ್ದು ಸಂರಕ್ಷಣಾ ಟ್ರಸ್ಟ್‌ ದೂರನ್ನು ನೀಡಿದೆ.

“ಜೀವ ಇರುವ ಜೀವಿಗಳ ಮೇಲೆ ರಣಹದ್ದು ಬೇಟೆ ಆಡತ್ತೆ, ಆದರೆ ಹದ್ದು ಆ ರೀತಿ ಮಾಡೋದಿಲ್ಲ. ಸತ್ತ ಪ್ರಾಣಿಗಳನ್ನು ಹದ್ದು ತಿಂದು, ಪರಿಸರವನ್ನು ಕ್ಲೀನ್‌ ಮಾಡುತ್ತದೆ. ಉತ್ತಮ ಪರಿಸರ ಸ್ನೇಹಿಯಾಗಿರುವ ಪಕ್ಷಿ ಅದು. ದೊಡ್ಡ ವಾಹಿನಿ ಮೂಲಕ ಈ ವಿಷಯ ಬಿತ್ತರವಾಗಿದೆ. ಹೀಗಾಗಿ ಕಿಚ್ಚ ಸುದೀಪ್‌ ಅವರು ಈ ಬಗ್ಗೆ ಸ್ಪಷ್ಟನೆ ಕೊಡಬೇಕು, ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ನೋಡಿಕೊಳ್ಳಬೇಕು” ಎಂದು ಡಿಎಫ್‌ಒ ರಾಮಕೃಷ್ಣ ಅವರು ಮಾಧ್ಯಮದ ಜೊತೆ ಹೇಳಿದ್ದಾರೆ ಎಂದು ಎಷ್ಯಾನೆಟ್‌ ವರದಿ ಮಾಡಿದೆ.

ರಣಹದ್ದುಗಳು ಜೀವ ಇರುವೆಯನ್ನು ಕೂಡ ಮುಟ್ಟೋದಿಲ್ಲ, ಸತ್ತು ಹೋಗಿರುವ ಪ್ರಾಣಿಗಳ ಶವ ತಿನ್ನುತ್ತೇವೆ. ರಣಹದ್ದುಗಳ ಸಂತತಿಯ ಉಳಿವಿಗೋಸ್ಕರ ಹತ್ತು ವರ್ಷಗಳಿಂದ ನಾವು ಹೋರಾಟ ಮಾಡಿದ್ದೇವೆ. ಆದರೆ ಜ್ಞಾನದ ಕೊರತೆಯಿಂದ ಸುದೀಪ್‌ ಈ ರೀತಿ ಮಾತನಾಡಬಾರದು ಎಂದು ರಣಹದ್ದು ಸಂರಕ್ಷಣಾ ಟ್ರಸ್ಟ್‌ ವತಿಯಿಂದ ದೂರು ನೀಡಲಾಗಿದೆ.

You may also like