Bengaluru : ಕಾಂಗ್ರೆಸ್ ಕಾರ್ಯಕರ್ತರು ನೀಡಿದ ದೂರಿನಿಂದಾಗಿ ಮನನೊಂದ ಬಿಜೆಪಿ ಕಾರ್ಯಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವಿನಯ್ ಸೋಮಯ್ಯ ( 35 ) ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ. ಕಳೆದ ಎರಡು ತಿಂಗಳ ಹಿಂದೆ ವಿನಯ್ ಸೋಮಣ್ಣ ಅಡ್ಮಿನ್ ಆಗಿರುವ ವಾಟ್ಸಾಪ್ ಗ್ರೂಪ್‌ನಲ್ಲಿ ಮಡಿಕೇರಿ ಶಾಸಕ ಕಾಂಗ್ರೆಸ್‌ನ ಪೊನ್ನಣ್ಣ ವಿರುದ್ಧ ಸದಸ್ಯರೊಬ್ಬರು ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಗ್ರೂಪ್‌ನ ಅಡ್ಮಿನ್ ಆದ ಕಾರಣ ವಿನಯ್ ಸೋಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಇದರಿಂದ ಮನನೊಂದಿದ್ದ ವಿನಯ್ ಸೋಮಯ್ಯ ಈ ಘಟನೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದರಂತೆ. ಅಲ್ಲದೇ ಪ್ರಕರಣ ತಣ್ಣಗಾದರೂ ಸಹ ತಮ್ಮ ವಿರುದ್ಧ ಬರುತ್ತಿದ್ದ ಕಾಮೆಂಟ್‌ಗಳಿಂದ ಮನನೊಂದ ವಿನಯ್ ಸೋಮಯ್ಯ ನಾಗವಾರದ ತಮ್ಮ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನು ಆತ್ಮಹತ್ಯೆಗೂ ಮುನ್ನ ಅದೇ ವಾಟ್ಸಾಪ್ ಗ್ರೂಪ್‌ನಲ್ಲಿ ಸಾವಿನ ಕುರಿತು ಬರೆದುಕೊಂಡಿರುವ ವಿನಯ್ ಸೋಮಯ್ಯ ರಾಜಕೀಯ ಪ್ರೇರಿತ ಎಫ್‌ಐಆರ್ ಎಂದು ಉಲ್ಲೇಖಿಸಿದ್ದಾರೆ.
