Belagavi: ಕಂಡಕ್ಟರ್ ಮಹದೇವಪ್ಪ ಅವರ ಮೇಲೆ ದಾಖಲಾಗಿದ್ದ ಪೋಕ್ಸೋ ಕೇಸನ್ನು ಸಂತ್ರಸ್ತೆಯ ತಾಯಿ ವಾಪಾಸ್ ಪಡೆದುಕೊಂಡಿದ್ದಾರೆ. ಹಾಗೂ ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಕೆ.ಎಸ್.ಆರ್.ಟಿ.ಸಿ. ಬಸ್‌ನಲ್ಲಿ ಎರಡು ದಿನದ ಹಿಂದೆ ಟಿಕೆಟ್ ಕೊಡುವ ಸಂದರ್ಭದಲ್ಲಿ ಕಂಡಕ್ಟರ್ ಮಹದೇವಪ್ಪ ಮರಾಠಿ ಬರಲ್ಲ ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಬಸ್‌ನಲ್ಲಿದ್ದ ಮರಾಠಿ ಪುಂಡರು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದರು. ನಂತರ ಮರಾಠಿ ಮಾತನಾಡುವಂತೆ ಒತ್ತಾಯ ಮಾಡಿದ್ದರು. ನಂತರ ಹಲ್ಲೆಗೊಳಗಾದ ಕಂಡಕ್ಟರ್ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಅನಂತರ ಮರಾಠಿಗಳು ನಿರ್ವಾಹಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದರು. ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲು ಮಾಡಿದ್ದ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟರ್ ಅವರ ತಲೆದಂಡವಾಗಿದ್ದು ಅವರನ್ನು ಬೆಳಗಾವಿಯ ಸಿಸಿಆರ್ ಬಿಗೆ ವರ್ಗಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆದೇಶ ನೀಡಿದ್ದಾರೆ.
