Home » ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ|ಮೂವರಿಗೆ ಚಾಕು ಇರಿತ-ಓರ್ವನ ಸ್ಥಿತಿ ಗಂಭೀರ

ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ|ಮೂವರಿಗೆ ಚಾಕು ಇರಿತ-ಓರ್ವನ ಸ್ಥಿತಿ ಗಂಭೀರ

0 comments

ಪಕ್ಷಗಳ ನಡುವೆ ಜಗಳ ನಡೆಯುತ್ತಲೇ ಇದ್ದು, ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಮೂವರು ಚಾಕು ಇರಿತಕ್ಕೆ ಒಳಗಾದ ಘಟನೆ ಗದಗ ಜಿಲ್ಲೆ ಬೆಟಗೇರಿಯ ಮಂಜುನಾಥನಗರದಲ್ಲಿ
ಘಟನೆ ನಡೆದಿದೆ.

ಎರಡು ಗುಂಪುಗಳು ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದರಿಂದ,ಮೂವರಿಗೆ ಚಾಕು ಇರಿತವಾಗಿದೆ.ಈ ಘಟನೆಯಿಂದ ಶಿವರಾಜ್ ಪೂಜಾರ, ಮಲ್ಲೇಶ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು ,ಗಜೇಂದ್ರಸಿಂಗ್ ಸೊಲ್ಲಾಪುರ ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ.

ಬೆಟಗೇರಿ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ
ನೀಡಲಾಗುತ್ತಿದ್ದು, ನೂರಾರು ಜನರು ಆಸ್ಪತ್ರೆ ಆವರಣದಲ್ಲಿ
ಜಮಾಯಿಸಿದ್ದು, ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ
ಪ್ರಕರಣ ದಾಖಲಾಗಿದೆ.

You may also like

Leave a Comment