Free electricity effect: ಕಾಂಗ್ರೆಸ್ (Congress) ಈ ಬಾರಿ 5 ಗ್ಯಾರಂಟಿಗಳ (5 guarantees) ಭರವಸೆ ನೀಡಿ, ಇದೀಗ ನುಡಿದಂತೆ ನಡೆದುಕೊಂಡಿದೆ. ಹಾಗೆಯೇ 200 ಯುನಿಟ್ ಉಚಿತ ವಿದ್ಯುತ್ (200 units of free electricity) ನೀಡುವ ಯೋಜನೆ ಬಗ್ಗೆ ಅಧಿಕೃತ ಘೋಷಣೆ ಕೂಡ ಮಾಡಿದೆ. ಈ ಘೋಷಣೆ ಬೆನ್ನಲ್ಲೆ( Free electricity effect) ರಾಜ್ಯದಲ್ಲಿ ಎಲೆಕ್ಟ್ರಿಕ್ ವಸ್ತುಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಎಲೆಕ್ಟ್ರಿಕ್ ಬೈಕ್ಗಳು, ಇಂಡಕ್ಷನ್ ಸ್ಟವ್ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ಹೌದು, ರಾಜ್ಯದಲ್ಲಿ ಕರೆಂಟ್ ಉಚಿತವಾಗಿ(Gruha Jyothi scheme) ಸರ್ಕಾರ ನೀಡ್ತಿದ್ದಂತೆ ಎಲೆಕ್ಟ್ರಿಕ್ ಬೈಕ್‌ಗಳಿಗೆ(Electric Bikes) ಬಹಳ ಡಿಮ್ಯಾಂಡ್ ಬಂದಿದೆ. ಅದರಲ್ಲೂ ಬೆಳಗಾವಿಯಲ್ಲಿ (Belagavi) ಹೆಚ್ಚಿನ ಪ್ರಮಾಣದಲ್ಲಿ ಈ ಬೈಕ್ಗಳು ಮಾರಾಟ ಆಗ್ತಿವೆ. ಈ ವರೆಗೂ ದಿನಕ್ಕೆ ಎರಡರಿಂದ ಮೂರು ಮಾರಾಟ ಆಗ್ತಿದ್ದ ಬೈಕ್ಗಳು ಇದೀಗ ಬೈಕ್ ಮಾರಾಟದ ಸಂಖ್ಯೆ ಹೆಚ್ಚಾಳವಾಗಿದೆ. ಈ ಬೈಕು ಒಂದು ಬಾರಿ ಚಾರ್ಜ್ ಮಾಡಿದ್ರೇ ಎರಡು ಯುನಿಟ್ ನಷ್ಟು ವಿದ್ಯುತ್ ಖರ್ಚಾಗುತ್ತಿದ್ದು ಹೀಗಾಗಿ ಸಾಕಷ್ಟು ಜನ ಬೈಕ್ ಕೊಂಡುಕೊಳ್ಳುತ್ತಿದ್ದಾರೆ.
ಇನ್ನು ದುಬಾರಿ ಪೆಟ್ರೋಲ್ ಬೆಲೆಗೆ ಪರ್ಯಾಯವಾಗಿ ವಿದ್ಯುತ್ ಚಾಲಿತ ವಾಹನ ಖರೀದಿಗೆ ಹಾಸನದಲ್ಲಿ ಕೂಡ ಡಿಮ್ಯಾಂಡ್ ಹೆಚ್ಚಿದೆ. ಎರಡು ಯುನಿಟ್ ಬಳಸಿದ್ರೆ 80.ಕಿಲೋಮೀಟರ್ ಪ್ರಯಾಣ ಮಾಡಬಹುದು. ಕೇವಲ 6 ರೂಗೆ 80. ಕಿಲೋಮೀಟರ್ ಸಂಚಾರ, ಅದೂ ಕೂಡ ಕರೆಂಟ್ ಉಚಿತವಾಗಿ ಸಿಗುವ ಕಾರಣ ಹೆಚ್ಚಿನ ಲಾಭ ಹಿನ್ನೆಲೆಯಲ್ಲಿ ಜನರು ಎಲೆಕ್ಟ್ರಾನಿಕ್ ಬೈಕ್ ಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ಇನ್ನು ಇಂಡಕ್ಷನ್ ಸ್ಟವ್ಗೂ ಡಿಮ್ಯಾಂಡ್ ಹೆಚ್ಚಿದೆ. ಇದರಿಂದ ಗ್ಯಾಸ್ ಬಳಕೆ ಮಾಡೋದು ಕಡಿಮೆ ಆಗಬಹುದು.
ಇಂಡಕ್ಷನ್ ಸ್ಟವ್ ನಲ್ಲಿ ವೇಗವಾಗಿ ಆಹಾರ ಮಾಡಬಹುದು. ಸಾಮಾನ್ಯವಾಗಿ 2000 ವ್ಯಾಟ್ ನ ಇಂಡಕ್ಷನ್ ಸ್ಟವ್ ಒಂದು ಗಂಟೆ ಬಳಕೆ ಮಾಡಿದ್ರೆ 2.2 ಯುನಿಟ್ ವಿದ್ಯುತ್ ಖರ್ಚು ಆಗುತ್ತೆ. ಒಟ್ಟಿನಲ್ಲಿ ಇಂಡಕ್ಷನ್ ಸ್ಟವ್ ಗೆ ಡಿಮ್ಯಾಂಡ್ ಅಂದ್ರೆ ಡಿಮ್ಯಾಂಡ್. ಜೊತೆಗೆ ಕರೆಂಟ್ ಗೀಸರ್ ಸಹ ಹೆಚ್ಚಿನ ಮಾರಾಟ ಸಂಶಯವಿಲ್ಲ.
