Shakti Scheme : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿಗೆ ತಂದ ಶಕ್ತಿ ಯೋಜನೆಯಿಂದ( Shakthi Free Bus Effect)ಫ್ರೀ ಫ್ರೀ ಎಂದು ಟ್ರಿಪ್ ಹೊಡೆಯುವ ಮಹಿಳೆಯರು ಸಿಕ್ಕಿದ್ದೇ ಚಾನ್ಸ್ ಎಂದು ತೀರ್ಥ ಕ್ಷೇತ್ರ ದರ್ಶನ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಕಾಮನ್ ಆಗಿ ಬಿಟ್ಟಿದೆ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಯಲ್ಲಿ (Congress Guarantee scheme) ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ “ಶಕ್ತಿ” ಯೋಜನೆಗೆ (Shakti Scheme) ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈಗಾಗಲೇ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಮಹಿಳಾಮಣಿಗಳು ನೂಕು ನುಗ್ಗಲಿನಿಂದ ಓಡಾಡುವುದು ಸಾಮಾನ್ಯವಾಗಿ ಬಿಟ್ಟಿದ್ದು, ಬಸ್ಸಿನಲ್ಲಿ ನಿಲ್ಲಲು ಜಾಗವಿಲ್ಲದೆ ಪ್ರಯಾಣಿಕರ ಒದ್ದಾಡುವ ಪರಿಸ್ಥಿತಿ ಕೂಡ ನಿರ್ಮಾಣವಾಗುತ್ತಿದೆ.
ಸರ್ಕಾರ ‘ಶಕ್ತಿ’ ಸ್ಮಾರ್ಟ್ಕಾರ್ಡ್ ವಿತರಣೆ ಮಾಡಲಿದ್ದು, ಸದ್ಯ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲು ಮುಂದಾಗಿದ್ದು, ಈ ವಿಳಾಸವಿರುವ ಯಾವುದೇ ದಾಖಲೆಯಾದರೂ ಅಂದರೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ತೋರಿಸಿ ಪ್ರಯಾಣಿಸಲು ಅನುವು ಮಾಡಿಕೊಡಲಾಗಿತ್ತು.ಆದರೆ, ಸರ್ಕಾರ ಈಗ ಸ್ಮಾರ್ಟ್ ಕಾರ್ಡ್ ಮಾಡಿಸಲು ಮುಂದಾಗಿದ್ದು, ಸಮಯದ ಗಡುವನ್ನೂ ನೀಡಿದ್ದು, ಸೆಪ್ಟೆಂಬರ್ 7 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿಇನ್ನು ಈ ಸ್ಮಾರ್ಟ್ ಕಾರ್ಡ್‌ಗೆ ಮಹಿಳೆಯರೇ ಹಣ ಪಾವತಿ ಮಾಡಬೇಕು ಎಂದು ಸರ್ಕಾರ ನಿರ್ಣಯ ಕೈಗೊಂಡಿದೆ. ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಶಕ್ತಿ ಯೋಜನೆಯಡಿ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ಸೇವಾ ಶುಲ್ಕ 14.15 ರೂ. ನಿಗದಿ ಮಾಡಿ ಅನುಮೋದನೆ ನೀಡಲಾಗಿದ್ದು, ಈ ಮೊತ್ತವನ್ನು ಸಾರ್ವಜನಿಕರೇ ಭರಿಸಬೇಕು ಎಂದು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ. ಮಹಿಳೆಯರು ಈ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಲು ರಾಜ್ಯ ಸರ್ಕಾರ 6 ತಿಂಗಳ ಗಡುವನ್ನು ನಿಗದಿ ಮಾಡಿದೆ. ಈ ಆರು ತಿಂಗಳಲ್ಲಿ ಮಹಿಳೆಯರು ನಿಗದಿತ ಕೇಂದ್ರಕ್ಕೆ ಹೋಗಿ ಸ್ಮಾರ್ಟ್ ಕಾರ್ಡ್ ಅನ್ನು ಮಾಡಿಸಿಕೊಳ್ಳಬೇಕು. ಒಂದು ವೇಳೆ ಈ ಗಡುವು ಮುಗಿದ ಬಳಿಕ ಈ ಪ್ರಯೋಜನ ಪಡೆಯಲು ಸಾಧ್ಯವಿಲ್ಲ ಎನ್ನಲಾಗಿದೆ. ಉಚಿತ ಪ್ರಯಾಣದ ಭಾಗ್ಯ ಮಹಿಳೆಯರಿಗೆ ಸಿಗುವುದಿಲ್ಲ ಎನ್ನಲಾಗಿದ್ದು, ಅಂಥವರು ದುಡ್ಡು ಕೊಟ್ಟು ಪ್ರಯಾಣ ಮಾಡಬೇಕಾಗುತ್ತದೆ.
ಇದನ್ನೂ ಓದಿ: Anna Bhagya Scheme: ಜನರಿಗೆ ಮತ್ತೊಂದು ಸಂತಸದ ಸುದ್ದಿ- ಇನ್ಮುಂದೆ ಇವರಿಗೂ ಸಿಗಲಿದೆ ಅನ್ನಭಾಗದ 5 ಕೆಜಿ ಅಕ್ಕಿ !!
