Home » MUDA Case: ಸಿಎಂ ಸಿದ್ದು ವಿರುದ್ಧ ಹೆಚ್ಚು ದಾಖಲೆ ನೀಡಿದ್ದೇ ಕಾಂಗ್ರೆಸ್ ನಾಯಕರು- ಮೂಡ ದೂರುದಾರ ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ!!

MUDA Case: ಸಿಎಂ ಸಿದ್ದು ವಿರುದ್ಧ ಹೆಚ್ಚು ದಾಖಲೆ ನೀಡಿದ್ದೇ ಕಾಂಗ್ರೆಸ್ ನಾಯಕರು- ಮೂಡ ದೂರುದಾರ ಸ್ನೇಹಮಯಿ ಕೃಷ್ಣ ಸ್ಫೋಟಕ ಹೇಳಿಕೆ!!

0 comments

MUDA Case: ಮೂಡ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ನಾಯಕರೇ ನನಗೆ ಹೆಚ್ಚು ದಾಖಲೆಯನ್ನು ನೀಡಿದ್ದು ಎಂಬುದಾಗಿ ದೂರು ದಾದ ಸ್ನೇಹಮಯಿ ಕೃಷ್ಣ ಅವರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ ಅವರು ಮುಡಾ ಹಗರಣದ ವಿಚಾರದಲ್ಲಿ ಕಳೆದ ಜನವರಿ ತಿಂಗಳಿಂದ ನನಗೆ ಅತಿ ಹೆಚ್ಚಿನ ದಾಖಲೆಗಳು ಕಾಂಗ್ರೆಸ್ ನಾಯಕರಿಂದ ಬಂದಿವೆ. ಕಾಂಗ್ರೆಸ್ ನಾಯಕರು ಕೊಟ್ಟಿರುವ ದಾಖಲೆಗಳು ನನ್ನ ಹೋರಾಟದ ವೇಗ ಹೆಚ್ಚಿಸಿವೆ ಎಂದು ತಿಳಿಸಿದ್ದಾರೆ.

ಈ ಕುರಿತಾಗಿ ಮಾತನಾಡಿದ ಕೃಷ್ಣ ಅವರು ಕಾಂಗ್ರೆಸ್‌ನಲ್ಲೂ ಸಿಎಂ ಭ್ರಷ್ಟಾಚಾರದ ಬಗ್ಗೆ ಅಸಮಾಧಾನ ಇರುವ ಜನ ಹೆಚ್ಚಿದ್ದಾರೆ. ಪಕ್ಷದ ಒಳಗೆ ಅದನ್ನು ತೋರಿಸಲು ಅವರಿಗೆ ಆಗಲ್ಲ. ಹೀಗಾಗಿ, ನನಗೆ ದಾಖಲೆ ಕೊಟ್ಟಿದ್ದಾರೆ. ಕಾಂಗ್ರೆಸ್‌ನ ಯಾವ ಹಂತದ ನಾಯಕರು, ಅವರು ಯಾರು ಅನ್ನೋದನ್ನು ನಾನು ಹೇಳುವುದಿಲ್ಲ ಎಂದಿದ್ದಾರೆ.

You may also like