Home » Nayana Motamma: ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮನಿಂದ ಸರ್ಕಾರಕ್ಕೆ ರಾಜಿನಾಮೆ ಬೆದರಿಕೆ !!

Nayana Motamma: ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮನಿಂದ ಸರ್ಕಾರಕ್ಕೆ ರಾಜಿನಾಮೆ ಬೆದರಿಕೆ !!

147 comments
Nayana Motamma

Nayana Motamma: ಸರ್ಕಾರವು ಕಸ್ತೂರಿ ರಂಗನ್‌ ವರದಿಯನ್ನು ಜಾರಿಗೊಳಿಸಿದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಕಾಂಗ್ರೆಸ್‌ ಶಾಸಕಿ ನಯನಾ ಮೋಟಮ್ಮ(Nayana Motamma) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ಗುರುವಾರ ವರದಿ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ(Eshwara Khandre) ಕರೆದಿದ್ದ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ನಯನಾ ಮೋಟಮ್ಮ ‘ಒಂದೊಮ್ಮೆ ವರದಿ ಜಾರಿ ಮಾಡುವುದಕ್ಕೆ ಸರಕಾರ ನಿರ್ಧರಿಸಿದರೆ ತಾನು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾಗಿ ತಿಳಿದು ಬಂದಿದೆ.

ಈ ಕುರಿತು ಮಾತನಾಡಿದ ಅವರು ‘ಕಸ್ತೂರಿ ರಂಗನ್‌ ವರದಿ ಅವೈಜ್ಞಾನಿಕವಾಗಿದ್ದು, ಜಾರಿಯಾದರೆ ಪಶ್ಚಿಮಘಟ್ಟದ ಜನಜೀವನ ಅಸ್ತವ್ಯಸ್ತವಾಗುತ್ತದೆ. ಜನಪ್ರತಿನಿಧಿಗಳಿಗೆ ಮತದಾರರನ್ನು ಎದುರಿಸುವುದಕ್ಕೆ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

You may also like

Leave a Comment