Home » G Parameshwar: ಬೆಂಗಳೂರಿಗೆ ಇಬ್ಬರು ಪೊಲೀಸ್‌ ಕಮಿಷನರ್‌ ನೇಮಕ ಚಿಂತನೆ: ಜಿ ಪರಮೇಶ್ವರ್‌

G Parameshwar: ಬೆಂಗಳೂರಿಗೆ ಇಬ್ಬರು ಪೊಲೀಸ್‌ ಕಮಿಷನರ್‌ ನೇಮಕ ಚಿಂತನೆ: ಜಿ ಪರಮೇಶ್ವರ್‌

0 comments
Dr G parameshwar

G Parameshwar: ಬೆಂಗಳೂರು ನಗರಕ್ಕೆ ಇಬ್ಬರು ಪೊಲೀಸ್‌ ಕಮಿಷನರ್‌ ನೇಮಕ ಮಾಡುವ ಕುರಿತು ಚಿಂತನೆ ಮಾಡಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್‌ ಹೇಳಿದ್ದಾರೆ.

ಇಂದು ತುಮಕೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ, ಬಿಬಿಎಂಪಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮಾಡಲಾಗಿದೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಐದು ಮಹಾನಗರ ಪಾಲಿಕೆಗಳನ್ನು ರಚಿಸಲಾಗಿದೆ. ಅದರ ಭಾಗವಾಗಿ ಇಬ್ಬರು ಪೊಲೀಸ್‌ ಕಮೀಷನರ್‌ ನೇಮಕ ಮಾಡಬೇಕು ಎಂಬ ಬೇಡಿಕೆ ಇದೆ ಎಂದು ಹೇಳಿದರು.

ಪೊಲೀಸ್‌ ಅಧಿಕಾರಿ ಹಾಗೂ ಕಾನ್‌ಸ್ಟೇಬಲ್‌ಗಳ ನೇಮಕಾತಿ ಸಮಯದಲ್ಲಿ ಗರಿಷ್ಠ ವಯೋಮಿತಿ ಹೆಚ್ಚಳ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಸಬ್‌ಇನ್ಸ್‌ಪೆಕ್ಟರ್‌, ಕಾನ್ಸ್‌ಟೇಬಲ್‌ಗಳಿಗೆ ಗರಿಷ್ಠ ವಯೋಮಿತಿ ನಿಗದಿ ಮಾಡುವ ಕುರಿತು ಸದ್ಯದಲ್ಲೇ ನಿರ್ಧಾರ ಮಾಡಲಾಗುವುದು. ಇದಕ್ಕೆ ಸಂಬಂಧಪಟ್ಟಂತೆ ಪ್ರಸ್ತಾವಕ್ಕೆ ಅನುಮತಿ ನೀಡಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.

ಹೊಸ ಕಮೀಷನರ್‌ ಹುದ್ದೆ ಸೃಷ್ಟಿ, ಅದರ ಸಾಧಕ, ಬಾಧಕ, ಬೇಕಾಗುವ ಸಿಬ್ಬಂದಿ, ಖರ್ಚು ವೆಚ್ಚಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿದ್ದು, ಶೀಘ್ರ ಅಂತಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

You may also like