Home » Newark: ಲೈಂಗಿಕತೆಯನ್ನೂ ಕೆಲಸವೆಂದು ಪರಿಗಣಿಸಿ, ಕಾನೂನುಬದ್ಧಗೊಳಿಸಲು ಹೊಸ ಮಸೂದೆ ಮಂಡನೆ- ಅಮೇರಿಕಾದಲ್ಲಿ ಹೀಗೊಂದು ಅಚ್ಚರಿ ಬೆಳವಣಿಗೆ!!

Newark: ಲೈಂಗಿಕತೆಯನ್ನೂ ಕೆಲಸವೆಂದು ಪರಿಗಣಿಸಿ, ಕಾನೂನುಬದ್ಧಗೊಳಿಸಲು ಹೊಸ ಮಸೂದೆ ಮಂಡನೆ- ಅಮೇರಿಕಾದಲ್ಲಿ ಹೀಗೊಂದು ಅಚ್ಚರಿ ಬೆಳವಣಿಗೆ!!

by ಹೊಸಕನ್ನಡ
0 comments
America

America :ಹಣ ಸಂಪಾದಿಸಲು ಇಂದು ಅನೇಕ ಮಾರ್ಗಗಳಿವೆ. ಸಾಕಷ್ಟು ಅವಕಾಶಗಳೂ ಇವೆ. ಆದರೆ ಕೆಲವರು ಸುಲಭದಲ್ಲಿ ಗಳಿಕೆ ಮಾಡುವಂತಹ, ಅನ್ಯಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಅಂತದರಲ್ಲಿ ವೇಶ್ಯವಾಟಿಕೆಯೂ ಒಂದು. ಇದು ಕಾನೂನು ಬಾಹಿರ ಎಂದು ಗೊತ್ತಿದ್ದರೂ ಅನೇಕರು ಇದರಿಂದಲೇ ಹಣಗಳಿಕೆಗೆ ಇಳಿದಿದ್ದಾರೆ. ಆದರೀಗ ಅಮೇರಿಕಾ (America)ದೇಶದಲ್ಲಿ ಈ ಲೈಂಗಿಕತೆಯನ್ನು, ಸಂಭೋಗ ನಡೆಸುವುದನ್ನು ಕಾನೂನುಬದ್ಧಗೊಳಿಸಲು ಹೊಸ ಮಸೂದೆಯೊಂದನ್ನು ಮಂಡಿಸಲಾಗಿದೆ.

 

ಹೌದು, ಅಮೆರಿಕದ (USA) ಕಾಪ್ ಹೇಟಿಂಗ್ ಕ್ವೀನ್ಸ್ ಕೌನ್ಸಿಲ್‌ನ (Queens CouncilWoman) ಟಿಫಾನಿ ಕ್ಯಾಬನ್ ಅವರು ಲೈಂಗಿಕ ಕಾರ್ಯಕರ್ತೆಯರ ಉದ್ಯಮವನ್ನ ಕಾನೂನುಬದ್ಧಗೊಳಿಸುವ ಹಾಗೂ ಲೈಂಗಿಕ ಕಾರ್ಯಕರ್ತೆಯರಿಗೆ ಸಹಾಯ ನೀಡುವ ಸಂಬಂಧ ಹೊಸ ಮಸೂದೆಯೊಂದನ್ನ ಮಂಡಿಸಿದ್ದಾರೆ.

 

ಅಂದಹಾಗೆ ಲೈಂಗಿಕ ವೃತ್ತಿ ಎಂಬುದು ಅಪರಾಧವಲ್ಲ. ಹಿಂದಿನ ಮತ್ತು ಪ್ರಸ್ತುತ ಲೈಂಗಿಕ ಕಾರ್ಯಕರ್ತೆಯರು ತೆರಿಗೆದಾರರ ನಿಧಿಯ ಸಹಾಯವನ್ನು ಪಡೆಯಬಹುದಾಗಿದೆ. ಅಲ್ಲದೇ ಕಾನೂನುಬದ್ಧವಾಗಿರುವ ಈ ಮಸೂದೆಯು ಜೀವನೋಪಾಯಕ್ಕಾಗಿ ದೇಹವನ್ನು ಪ್ರದರ್ಶಿಸುವ ಎಲ್ಲರಿಗೂ ಅನ್ವಯಿಸುತ್ತದೆ ಎಂದಿದ್ದಾರೆ.

 

ಅಲ್ಲದೆ ಈ ಮಸೂದೆ ಮಂಡಿಸುವುದರಿಂದ ಚಲನಶೀಲತೆ, ಆರೋಗ್ಯ, ವಸತಿ ಮತ್ತು ಸಾಮಾಜಿಕ ಒಳಿಗಾಗಿ ಆರ್ಥಿಕ ಬೆಂಬಲ ಒದಗಿಸಬಹುದು. ಜೊತೆಗೆ ಲೈಂಗಿಕ ಕಾರ್ಯಕರ್ತರೊಂದಿಗೆ ನೇರವಾಗಿ ಕೆಲಸ ಮಾಡುವ ಗುಂಪುಗಳಿಗೆ ಸರ್ಕಾರದಿಂದ ಅನುದಾನ ಒದಗಿಸಬಹುದು. ಉದ್ಯೋಗದ ಆಧಾರದ ಮೇಲೆ ತಾರತಮ್ಯ ನಿಷೇಧಿಸಬಹುದು. ಜೊತೆಗೆ ಲೈಂಗಿಕ ಕಾರ್ಯಕರ್ತೆಯರ ಸ್ಥಾನಮಾನವನ್ನು ರಕ್ಷಿಸಬಹುದು ಎಂದು ತಿಳಿಸಿದ್ದಾರೆ.

 

ಇನ್ನು ಲೈಂಗಿಕ ಕೆಲಸವೂ ಕೆಲಸವೇ ಆಗಿದೆ ಎಂದು ಹೇಳಿರುವ ಕ್ಯಾಬನ್(Tiffany Caban) ನ್ಯೂಯಾರ್ಕ್(Newark) ನಗರವು ತನ್ನ ಜನರ ಆರೋಗ್ಯ, ಸುರಕ್ಷತೆ ಮತ್ತು ಆರ್ಥಿಕ ಯೋಗಕ್ಷೇಮವನ್ನು ರಕ್ಷಿಸುವ ಜವಾಬ್ದಾರಿ ಹೊಂದಿದೆ. ಹಾಗಾಗಿ ಜೀವನಕ್ಕಾಗಿ ಏನು ಮಾಡಿದರೂ ಲೆಕ್ಕಿಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ :ಬರೀ ಒಳಉಡುಪಲ್ಲಿ ಫೋಟೋಶೂಟ್​ ಮಾಡಿಸೋ ಧೈರ್ಯ ಸೌತ್ ನಟಿಯರಿಗಿಲ್ಲ ಬಿಡಿ’ ಎಂದ ನೆಟ್ಟಿಗ!!

You may also like

Leave a Comment