Home » Dharmasthala Case: ಧರ್ಮಸ್ಥಳ ವಿರುದ್ಧ ವಿದೇಶಿ ಹಣ ಬಳಕೆ ಮಾಡಿ ಷಡ್ಯಂತ್ರ: ವಸಂತ ಗಿಳಿಯಾರ್‌

Dharmasthala Case: ಧರ್ಮಸ್ಥಳ ವಿರುದ್ಧ ವಿದೇಶಿ ಹಣ ಬಳಕೆ ಮಾಡಿ ಷಡ್ಯಂತ್ರ: ವಸಂತ ಗಿಳಿಯಾರ್‌

0 comments

Dharmasthala Case: ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿಯ ವಸಂತ ಗಿಳಿಯಾರ್‌ ಅವರು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ʼ ಕೆಲವು ದಿನಗಳಿಂದ ಧರ್ಮಸ್ಥಳದ ವಿಚಾರವಾಗಿ ಅನಗತ್ಯ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಹಾಗು ಮಂಜುನಾಥ ಸ್ವಾಮಿಯ ಚಿತ್ರಗಳನ್ನು ಬಳಸಿ ಅಪಪ್ರಚಾರ ಮಾಡಲಾಗುತ್ತಿದೆ. ಇದು ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರುವ ಹುನ್ನಾರʼ ಎಂದು ಹೇಳಿದರು.

ಕೆಲವು ಅನಧಿಕೃತ ಮಾಧ್ಯಮಗಳು, ಯೂಟ್ಯೂಬ್‌ ಚಾನೆಲ್ಗಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ. ಇಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಪೊಲೀಸ್‌ ಇಲಾಖೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಗಿಳಿಯಾರ್‌ ಆಗ್ರಹ ಮಾಡಿದರು.

ಕಾಣದ ಕೈಗಳು ಈ ಷಡ್ಯಂತ್ರದ ಹಿಂದಿದೆ. ಅವು ಯಾವುವು ಎಂದು ಇನ್ನಷ್ಟೇ ತಿಳಿದು ಬರಬೇಕಿದೆ. ಈ ಪ್ರಕರಣದ ಸಮಗ್ರ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಬೇಕು ಎಂದು ಅವರು ಸರಕಾರವನ್ನು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ. ಇದೇ ತಿಂಗಳು ಧರ್ಮಸ್ಥಳದಲ್ಲಿ ʼಧರ್ಮಜಾಗರಣಾ ಸಮಾವೇಶʼವನ್ನು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಲ್ಲಿ ಮಾಡಲಾಗುವುದು ಎಂದು ಅವರು ಈ ಸುದ್ದಿಗೋಷ್ಠಿಯಲ್ಲಿ ಹೇಳಿದರು.

You may also like