Ayodhya: ಅಯೋಧ್ಯೆಯಲ್ಲಿರುವ ರಾಮಮಂದಿರ ದಮೇಲೆ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಗುಜರಾತ್ ಹಾಗೂ ಹರಿಯಾಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಉತ್ತರಪ್ರದೇಶದ ಫೈಜಾಬಾದ್ ನಿವಾಸಿ ಅಬ್ದುಲ್ ರೆಹಮಾನ್ (19) ಎಂಬುವನನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸುವಾಗ ಸ್ಫೋಟಕ ವಿಚಾರಗಳು ಬಯಲಾಗಿದೆ.
ಹೌದು, ಗುಜರಾತ್ ಎಟಿಎಸ್ ಅಧಿಕಾರಿಗಳು ಶಂಕಿತ ಉಗ್ರನನ್ನು ಗುಜರಾತ್ಗೆ ಕರೆದೊಯ್ದು, ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಈತ ರಾಮಮಂದಿರ ಸೇರಿ ಹಲವು ಧಾರ್ವಿುಕ ಸ್ಥಳಗಳಲ್ಲಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದ ಎಂದು ತಿಳಿದು ಬಂದಿದೆ.. ಮಾಂಸದ ಅಂಗಡಿ ನಡೆಸುತ್ತಿದ್ದ ರೆಹಮಾನ್ ಬಿಡುವಿನ ಸಮಯದಲ್ಲಿ ಆಟೋವನ್ನು ಓಡಿಸುತ್ತಿದ್ದ. ಬಂಧಿತನನ್ನು ಎಟಿಎಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 10 ದಿನಗಳ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಅಲ್ಲದೆ ಹಲವಾರು ಜಮಾತ್ ಹಾಗೂ ಇಸ್ಲಾಮಿಕ್ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ರೆಹಮಾನ್ನನ್ನು ಬಳಸಿಕೊಂಡು ಐಸಿಸ್ ಅಯೋಧ್ಯೆ ಮೇಲೆ ದಾಳಿಗೆ ಸಂಚು ರೂಪಿಸಿತ್ತು. ಇದಲ್ಲದೆ ಈತ 2024ರಲ್ಲಿ ದೇವಸ್ಥಾನ ಉದ್ಘಾಟನೆಯಾದ ಬಳಿಕ ಹಲವು ಬಾರಿ ಪರಿಶೀಲನೆ ನಡೆಸಿದ್ದ ಎಂದು ತಿಳಿದು ಬಂದಿದ್ದು, ಎಟಿಎಸ್ ಅಧಿಕಾರಿಗಳು ವಿಸ್ತೃತ ತನಿಖೆಯನ್ನು ನಡೆಸುತ್ತಿದ್ದಾರೆ.
ಇನ್ನು ಬಂಧಿತನಿಂದ ಎರಡು ಹ್ಯಾಂಡ್ ಗ್ರನೇಡ್ಗಳು ಮತ್ತು ಕೆಲವು ಆಕ್ಷೇಪಾರ್ಹ ಪ್ರಕಟಣೆಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಗ್ರನೇಡ್ಗಳನ್ನು ಬಾಂಬ್ ನಿಷ್ಕ್ರಿಯ ದಳ ನಿಷ್ಕ್ರಿಯಗೊಳಿಸಿದೆ.
