Constable: ರಾಜ್ಯದಲ್ಲಿ ಇನ್ನು ಮುಂದೆ ಪೊಲೀಸ್ ಕಾನ್ಸ್ಟೇಬಲ್ ಆಗಲು ಪಿಯುಸಿ ಶಿಕ್ಷಣ ಪಡೆದಿರುವುದು ಕಡ್ಡಾಯ ಮಾಡಲು ರಾಜ್ಯ ಸಚಿವ ಸಂಪುಟವು ಇದೀಗ ಅನುಮೋದನೆ ನೀಡಿದೆ.
ಹೌದು, ಇದುವರೆಗೂ ಪೊಲೀಸ್ ಕಾನ್ಸ್ಟೇಬಲ್ ಆಗಲು ಎಸ್ಎಸ್ಎಲ್ಸಿ ಆಗಿದ್ದರೆ ಸಾಕಿತ್ತು. ಆದರೆ ಇನ್ನು ಮುಂದೆ ಹೀಗಿರುವುದಿಲ್ಲ ಪಿಯುಸಿ ಶಿಕ್ಷಣವನ್ನು ಪಡೆದಿದ್ದರೆ ಮಾತ್ರ ಅಂಥವರು ಕಾನಿಸ್ಟೇಬಲ್ ಆಗುತ್ತದೆ. ಈ ಸಂಬಂಧ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಈ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಎಚ್.ಕೆ. ಪಾಟೀಲ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಮತ್ತು ಭಾರತೀಯ ಮೀಸಲು ಪಡೆಯ (ಐಆರ್‌ಬಿ) ಕರಡು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಆಹ್ವಾನಿಸಿ ಪ್ರಕಟಿಸಬೇಕು. ಕರಡು ನಿಯಮಗಳಿಗೆ ಸ್ವೀಕೃತವಾಗುವ ಆಕ್ಷೇಪಣೆಗಳು ಗುರುತರವಾಗಿಲ್ಲದಿದ್ದಲ್ಲಿ, ಮತ್ತೊಮ್ಮೆ ಸಂಪುಟದ ಅನುಮೋದನೆ ಪಡೆಯದೆ ಅಂತಿಮಗೊಳಿಸಿ ಪ್ರಕಟಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
