Home » Puttur: ಉಪ್ಪಿನಂಗಡಿಯಲ್ಲಿ ಪೌಲ್ಟ್ರಿ ಫಾರಂ ನಿರ್ಮಾಣ: ಒಂದು ಸಾವಿರ ಮಂದಿಗೆ ಉದ್ಯೋಗ ಅವಕಾಶ: ಶಾಸಕ ಅಶೋಕ್ ರೈ

Puttur: ಉಪ್ಪಿನಂಗಡಿಯಲ್ಲಿ ಪೌಲ್ಟ್ರಿ ಫಾರಂ ನಿರ್ಮಾಣ: ಒಂದು ಸಾವಿರ ಮಂದಿಗೆ ಉದ್ಯೋಗ ಅವಕಾಶ: ಶಾಸಕ ಅಶೋಕ್ ರೈ

0 comments

Puttur: ಉಪ್ಪಿನಂಗಡಿಯ ಕೊಯಿಲದಲ್ಲಿ ಪಶು ಸಂಗೋಪನಾ ಇಲಾಖಾ ವ್ಯಾಪ್ತಿಯಲ್ಲಿರುವ ಭೂಮಿಯಲ್ಲಿ 50 ಎಕ್ರೆ ಜಾಗವನ್ನು ಪೌಲ್ಟ್ರಿ ಫಾರಂಗೆ ಲೀಸ್‌ಗೆ ನೀಡುವಂತೆ ಪಶುಸಂಗೋಪನಾ ಸಚಿವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಮನವಿ ಸಲ್ಲಿಸಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಶಾಸಕರು, ಪಶುಸಂಗೋಪನಾ ಇಲಾಖೆಯ ಅಧೀನದಲ್ಲಿ ಕೊಯಿಲದಲ್ಲಿರುವ ಜಾಗದಲ್ಲಿ ಕಂಪೆನಿಗೆ ಲೀಸ್‌ಗೆ ಜಾಗವನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಕಂಪೆನಿ ಸುಮಾರು 1೦೦ ಕೋಟಿ ರೂ ವೆಚ್ಚದಲ್ಲಿ ಉದ್ಯಮವನ್ನು ಪ್ರಾರಂಭ ಮಾಡಲಿದ್ದು ಇದರಿಂದ ಸ್ಥಳೀಯವಾಗಿ 1೦೦೦ ಉದ್ಯೋಗವೂ ಸೃಷ್ಟಿಯಾಗಲಿದೆ ಎಂದು ಸಚಿವರಿಗೆ ಶಾಸಕರು ತಿಳಿಸಿದ್ದಾರೆ. ಜಾಗ ನೀಡುವುದಾಗಿ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ.

You may also like