Viral News: ಮುಖೇಶ್ ಅಂಬಾನಿಯ ಆಂಟಿಲಿಯಾ ಮನೆಗೆ ಪ್ರವೇಶಿಸಲು ವಿದೇಶಿ ಕಂಟೆಂಟ್ ಕ್ರಿಯೇಟರ್ಸ್‌ಗಳಿಬ್ಬರು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ ಅಲ್ಲಿನ ಸೆಕ್ಯೂರಿಟಿ ಗಾರ್ಡ್ಸ್ ಇದು ಮನೆ, ರೆಸ್ಟೋರೆಂಟ್ ಅಲ್ಲ ಎಂದು ನಾಜೂಕಾಗಿ ಹೇಳಿ ಅವರಿಬ್ಬರಿಗೆ ಪ್ರವೇಶವನ್ನು ನಿರಾಕರಣೆ ಮಾಡಿದ್ದಾರೆ. ಇದರ ವೀಡಿಯೋ ಇದೀಗ ವೈರಲ್ ಆಗುತ್ತಿದೆ.
ವಿದೇಶಿ ಕಂಟೆಂಟ್ ಕ್ರಿಯೇಟರ್ಸ್‌ಗಳಾದ ಬೆನ್ ಮುಮದಿವಿರಿಯಾ ಮತ್ತು ಆರಿಸ್ ಯೇಗರ್ ಮುಂಬೈನಲ್ಲಿರುವ ಮುಖೇಶ್ ಅಂಬಾನಿಯ ಆಂಟಿಲಿಯಾವನ್ನು ಪ್ರವೇಶ ಮಾಡಲು ಯತ್ನ ಮಾಡಿದಾಗ ಈ ಘಟನೆ ನಡೆದಿದೆ.
ನಾವು ಅಂಬಾನಿ ಫ್ರೆಂಡ್ಸ್, ಶ್ರೀಮಂತ ಮಕ್ಕಳು ಎಂದು ಹೇಳಿದಾಗ, ನಿಮ್ಮ ಬಳಿ ಯಾವುದೇ ಮೆಸೇಜ್, ಇಮೇಲ್ ಇದೆಯಾ ಎಂದು ಸೆಕ್ಯೂರಿಟಿ ಗಾರ್ಡ್ ಕೇಳುತ್ತಾರೆ. ಇದಕ್ಕೆ ಯುವಕರು ನಾವು ಯಾವಾಗ ಬೇಕಾದರೂ ಬರಬಹುದು ಎಂದು ಮದುವೆ ಕಾರ್ಯಕ್ರಮದ ಸಂದರ್ಭದಲ್ಲಿ ಅಂಬಾನಿ ಕುಟುಂಬದವರು ಹೇಳಿದ್ದರು. ಬಾಲಿ ನನ್ನ ತಂದೆಯ ಒಡೆತನದಲ್ಲಿದ್ದು, ಅಂಬಾನಿ ಅಲ್ಲಿಗೆ ಬಂದಾಗ ನಾವು ಅವರನ್ನು ರಾಜರ ರೀತಿ ಸ್ವಾಗತ ಮಾಡುತ್ತೇವೆ. ನಮ್ಮನ್ನು ಕೂಡಾ ಒಳಗೆ ಹೋಗಲು ಬಿಡಿ ಎಂದು ಹೇಳುತ್ತಾನೆ.
ಇವರ ಮಾತುಗಳನ್ನು ಕೇಳಿದ ಸೆಕ್ಯೂರಿಟಿ ಗಾರ್ಡ್ ಇದು ಮನೆ, ರೆಸ್ಟೋರೆಂಟ್ ಅಲ್ಲ ಎಂದು ಹೇಳಿ ಹೊರ ಹೋಗಲು ಹೇಳಿದ್ದಾರೆ.
ಈ ವೀಡಿಯೋ ಸಖತ್ ವೈರಲ್ ಆಗಿದ್ದು, ಅಂಬಾನಿ ಸೆಕ್ಯೂರಿಟಿ ಗಾರ್ಡ್ ಇಂಗ್ಲೀಸ್ ಗೆ ಬಳಕೆದಾರರು ಫಿದಾ ಆಗಿದ್ದಾರೆ. ನನಗಿಂತ ಹೆಚ್ಚೇ ಇಂಗ್ಲೀಷ್ ಈತನಿಗೆ ತಿಳಿದಿದೆ, ಈ ಸೆಕ್ಯೂರಿಟಿ ಗಾರ್ಡ್ ಬಹಳ ಬುದ್ಧಿವಂತ ಎಂದು ಜನ ಬರೆದಿದ್ದಾರೆ.
