Home » Street Dog: ಬೀದಿ ನಾಯಿಗಳ ನಿಯಂತ್ರಣ – ಸುಪ್ರೀಂ ಕೋರ್ಟ್ ತೀರ್ಪು ವಿಚಾರ – ಆದೇಶ ಕಾಪಿ ಬಂದ ಮೇಲೆ ಸರ್ಕಾರದ ಜೊತೆ ಚರ್ಚೆ – ಬಿಬಿಎಂಪಿ ಕಮೀಷನರ್

Street Dog: ಬೀದಿ ನಾಯಿಗಳ ನಿಯಂತ್ರಣ – ಸುಪ್ರೀಂ ಕೋರ್ಟ್ ತೀರ್ಪು ವಿಚಾರ – ಆದೇಶ ಕಾಪಿ ಬಂದ ಮೇಲೆ ಸರ್ಕಾರದ ಜೊತೆ ಚರ್ಚೆ – ಬಿಬಿಎಂಪಿ ಕಮೀಷನರ್

0 comments

Street Dog: ಬೀದಿನಾಯಿಗಳ ಬಗ್ಗೆ ಸುಪ್ರೀಂಕೋರ್ಟ್ ಆದೇಶ ವಿಚಾರ ಸಂಬಂಧ ಮಾತನಾಡಿದ ಬಿಬಿಎಂಪಿ ಕಮೀಷನರ್ ಮಹೇಶ್ವರ್, ಸುಪ್ರೀಂಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದೇಶ ಕಾಪಿ ಬಂದ ಮೇಲೆ ಸರ್ಕಾರದ ಜೊತೆ ಚರ್ಚೆ ಮಾಡ್ತೇವೆ. ನಂತರ ಏನು ಕ್ರಮ ಕೈಗೊಳ್ಳಬೇಕು ಅಂತಾ ಚರ್ಚೆ ಮಾಡ್ತೇವೆ ಎಂದರು.

ವಿವಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಕಚ್ಚಿದ ಪ್ರಕರಣ ಸಂಬಂದ ಮಾಧಯಮ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾಯಿ ಕಚ್ಚಿದೆ ಅಂತ ಮಾಹಿತಿ ಬಂದಿದೆ. ತಂಡಗಳು ಸಮಸ್ಯೆ ಏನಿದೆ ಅಂತಾ ನೋಡಿ ಕಚ್ಚಿದ ನಾಯಿಯನ್ನು ರೆಸ್ಕೂವ್ಯು ಸೆಂಟರ್ ಗೆ ತೆಗೆದುಕೊಳ್ಳಲು ಕ್ರಮಕೈಗೊಳ್ಳುತ್ತೇವೆ. ನಂತರ ವೀಕ್ಷಣೆ ಮಾಡಿಸುತ್ತೇವೆ. ಸುಪ್ರೀಂ ಕೋರ್ಟ್ ತೀರ್ಪಿನ‌ ಬಗ್ಗೆ ಅಧ್ಯಯನ ಮಾಡಿ ನಂತರ ಕ್ರಮದ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ಹೇಳಿದರು.

ಬೆಂಗಳೂರಲ್ಲಿ ಒಂದು ಎರಡು ನಾಯಿ ಅಬ್ಸರ್ವೇಷನ್ ಸೆಂಟರ್ ಗಳಿವೆ. ಇನ್ನು ಹೆಚ್ಚು ಅಬ್ಸರ್ವೇಷಬ್ ಸೆಂಟರ್ ಗಳನ್ನ ಮಾಡಬೇಕಿದೆ. ಆಗ ನಾಯಿಗಳು ಕೂಡ ಒಳ್ಳೆ ವಾತಾವರಣದಲ್ಲಿ ಇರುತ್ತವೆ. ಸದ್ಯಕ್ಕೆ ಸುಮ್ಮನಹಳ್ಳಿಯಲ್ಲಿ ಅಬ್ಸರ್ವೇಷನ್ ಸೆಂಟರ್ ಇದೆ. ಈಗ 5 ಕಾರ್ಪೋರೇಷನ್ ಮಾಡಲಾಗುತ್ತಿದೆ. ಕಾರ್ಪೋರೇಷನ್ ಆದ ನಂತ್ರ ಕಾರ್ಪೋರೇಷನ್ ಗಳಲ್ಲಿ ಒಂದೊಂದು ಅಬ್ಸರ್ವೇಷನ್ ಸೆಂಟರ್ ಮಾಡಲಾಗುವುದು ಎಂದು ಬಿಬಿಎಂಪಿ ಕಮೀಷನರ್ ಮಹೇಶ್ವರ್ ಹೇಳಿದರು.

ನಾಯಿಗಳಿಗೆ ಚಿಕನ್ ರೈಸ್ ನೀಡುವ ವಿಚಾರವಾಗಿ ಮಾತನಾಡಿದ ಅವರು, ಊಟ ಇಲ್ಲದೇ ಸಾಕಷ್ಟು ನಾಯಿಗಳು ಕಚ್ಚುತ್ತಿದೆ. ನಾಯಿಗಳಿಗೆ ಹಸಿವು ಕಡಿಮೆ ಮಾಡುವ ದೃಷ್ಟಿಯಿಂದ ಊಟ ಕೊಡುತ್ತಿದ್ದೇವೆ. ಊಟ ಕೊಟ್ಟ ತಕ್ಷಣ ಕಚ್ಚಲ್ಲ ಅಂತೆನಿಲ್ಲ. ಅದ್ರ ಏರಿಯಾಗೆ ಬಂದ್ರು ನಾಯಿಗಳು ದಾಳಿ ಮಾಡುತ್ತವೆ. ಅವು ಊಟ ಇಲ್ಲದೇ ಹಸಿವಿನಿಂದ ಕಚ್ಚುತ್ತಿದ್ದವೆಯಾ ಮಾನಿಟರ್ ಮಾಡಬೇಕಿದೆ ಎಂದರು.

ಇದೇ ವೇಳೆ ವಿಧಾನ ಸೌಧದಲ್ಲಿ ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರೂಲಿಂಗ್ ನೀಡಿರುವ ಬಗ್ಗೆ ಮಾತನಾಡಿದ ಶಾಸಕ ಡಾ. ಭರತ್ ಶಟ್ಟಿ, ಅದನ್ನ ಎಲ್ಲರೂ ಪಾಲನೆ ಮಾಡಬೇಕು. ಸುಪ್ರೀಂ ಕೋರ್ಟ್ ನಾಯಿಗಳನ್ನ ಕೊಲ್ಲಲು ಹೇಳಿಲ್ಲ. ನಾಯಿಗಳನ್ನ ಸೇಫ್ ಜಾಗದಲ್ಲಿ ಹಾಕಬೇಕು. ದೆಹಲಿಗೆ ಮಾತ್ರ ತೀರ್ಪು ಸೀಮಿತವಾಗದೆ, ಇದನ್ನು ಎಲ್ಲೆಡೆ ಅಳವಡಿಸಬೇಕು. ಸ್ಟೆರ್ಲೈಸ್ ಮಾಡಬೇಕು ಎಂದರು.

ಮತ್ತೆ ಬೀದಿನಾಯಿಗಳನ್ನ ಈಚೆಗೆ ಬರದಂತೆ ಕ್ರಮ ಆಗಬೇಕು. ರೇಬೀಸ್ ಬಂದಿರೋ ಹಾಗೂ ಬೀದಿ ನಾಯಿಗಳು ಕಚ್ಚಿ ಅನೇಕರು ಸಾವನ್ನಪ್ಪಿದ್ದಾರೆ. ಅಟ್ಯಾಕ್ ಮಾಡೋ ದೃಶ್ಯಗಳನ್ನು ನೋಡಿದ್ದೇವೆ. ಹಾಗಂತ ನಾಯಿಗಳನ್ನ ಕೊಲ್ಲಲು ನಾವು ಹೇಳ್ತಿಲ್ಲ. ಸೇಫಾಗಿ ಒಂದು ಕಡೆ ಕೂಡಿಹಾಕಬೇಕು. ಬಿರ್ಯಾನಿ ಕೊಟ್ರೆ ಜನರ ಮೇಲೆ ದಾಳಿ ಮಾಡುತ್ತೆ. ಬಿರ್ಯಾನಿ ಕೊಡೋದನ್ನ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

Dharmasthala Case: ಧರ್ಮಸ್ಥಳ ಶವಪತ್ತೆ ಪ್ರಕರಣ – ತನಿಖೆ ಮುಗಿಯಲಿ, ಸದನದಲ್ಲಿ ಚರ್ಚೆಗೆ ಅವಕಾಶ ಕೊಡ್ತೀನಿ – ಸ್ಪೀಕರ್ ಖಾದರ್

You may also like