ಬೀದರ್: ಜಿಲ್ಲೆಯ ಬಸವಕಲ್ಯಾಣದಲ್ಲಿ ಭಾನುವಾರ ಸೂಫಿ-ಸಂತರ ಸಮಾವೇಶ ನಡೆದಿದ್ದು, ಈ ಸಂದರ್ಭದಲ್ಲಿ ಮುಂಬೈ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಜಿ.ಕೋಲ್ಸೆ ಪಾಟೀಲ್ ಅವರು ಹಿಂದೂ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಹಿಂದೂ ಧರ್ಮ, ಬ್ರಾಹ್ಮಣರು ಹಾಗೂ ಆರ್‌ಎಸ್‌ಎಸ್ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿ ಟೀಕೆ ಮಾಡಿದ್ದಾರೆ.
ಹಿಂದೂ ಎಂಬುದು ಧರ್ಮವೇ ಅಲ್ಲ. ಅದು ಪರ್ಷಿಯನ್ ಪದ; ಪರ್ಷಿಯನ್ ಭಾಷೆಯಲ್ಲಿ ‘ಹಿಂದೂ’ ಎಂದರೆ ಬೈಗುಳ ಎಂಬ ಅರ್ಥ ಇದೆ. ಬ್ರಾಹ್ಮಣರು ಅವರ ಬುದ್ಧಿಯಿಂದ ಜನರನ್ನು ಗುಲಾಮರನ್ನಾಗಿ ಮಾಡಿ ಹಿಂದೂ ಧರ್ಮ ಎಂದು ಸೃಷ್ಟಿ ಮಾಡಿದ್ದಾರೆ’’ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ, ‘ದೇಶದಲ್ಲಿನ ಎಲ್ಲಾ ದಂಗೆಗಳಿಗೆ, ಸಿಖ್ಖರ ದಂಗೆಗೂ ಆರ್‌ಎಸ್‌ಎಸ್ ಕಾರಣ. ಅನೇಕರು ಆರ್‌ಎಸ್‌ಎಸ್ ವಿರುದ್ಧ ಮಾತನಾಡಲು ಭಯ ಪಡ್ತಾರೆ. ಬ್ರಾಹ್ಮಣರು ಮತ್ತು ಆರ್‌ಎಸ್‌ಎಸ್ ವಿರುದ್ಧ ಮಾತನಾಡಲು ಭಯಪಡಬೇಡಿ; ಅವರು ದೇಶದಲ್ಲಿ ಇರುವುದು ಕೇವಲ ಒಂದು ಪರ್ಸೆಂಟ್ ಮಾತ್ರ’ ಎಂದು ಕೋಲ್ಸೆ ಪಾಟೀಲ್ ಹೇಳಿದ್ದಾರೆ.
