5
Ranveer Allahbadia: ಪೋಷಕರ ಲೈಂಗಿಕತೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ʼಬೀರ್‌ಬೈಸೆಪ್ಸ್ʼ ಖ್ಯಾತಿಯ ಯೂಟ್ಯೂಬರ್ ರಣ್‌ವೀರ್ ಅಲಹಾಬಾದಿಯಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಯೂಟ್ಯೂಬ್ ವಿವಾದಾತ್ಮಕ ವಿಡಿಯೋವನ್ನು ಅಳಿಸಿ ಹಾಕಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ನೋಟಿಸ್ ಪಡೆದ ನಂತರ ವಿಡಿಯೋವನ್ನು ಯೂಟ್ಯೂಬ್ ಡಿಲೀಟ್ ಮಾಡಿದೆ.
ಇತ್ತ ಪೋಷಕರ ಮಿಲನ ಕುರಿತು ವಿವಾದಾತ್ಮಕ ಹೇಳಿಕೆ ಕುರಿತು ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಐವರು ಪೊಲೀಸ್ ಅಧಿಕಾರಿಗಳ ತಂಡವು ಮುಂಬೈನ ವರ್ಸೋವಾದಲ್ಲಿರುವ ರಣವೀರ್ ಅವರ ಮನೆಗೆ ಎಂಟ್ರಿ ನೀಡಿದೆ.
